ಕಾರವಾರ (ಉತ್ತರ ಕನ್ನಡ): ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿರುವ ಘಟನೆ ಕಾರವಾರ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ಬೈತಖೋಲ್ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ವಾಮನ್ ಹರಿಕಂತ್ರ ಎನ್ನುವವರ ಮಾಲಿಕತ್ವದ ಬೋಟ್ ನಲ್ಲಿ ರಂಧ್ರ ಉಂಟಾಗಿ ನೀರು ತುಂಬಿದೆ. ಇದರಿಂದಾಗಿ ಬೋಟ್ ಮುಳುಗಲು ಪ್ರಾರಂಭಿಸಿತ್ತು. ಬೋಟ್‌ನಲ್ಲಿ 30 ಮೀನುಗಾರರಿದ್ದು, ಸಮೀಪದಲ್ಲಿದ್ದ ಮತ್ತೊಂದು ಬೋಟಿನ ಸಹಾಯದಿಂದ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ.
30 ಟನ್ ಮೀನುಗಳನ್ನು ಶಿಕಾರಿ ಮಾಡಿ ಬರುವಾಗ ಘಟನೆ ಸಂಭವಿಸಿದ್ದು, ಭಾರವಾದ ಕಾರಣ ಬೋಟಿನಲ್ಲಿದ್ದ ಮೀನನ್ನ ಸಮುದ್ರಕ್ಕೆ ಎಸೆದು ಬಳಿಕ ಬೋಟನ್‌ನ ಬೈತಖೋಲ್ ಬಂದರಿಗೆ ಎಳೆದು ತರಲಾಗಿದೆ. ಆದರೆ ಬಂದರಿನಲ್ಲಿ ನಿಲ್ಲಿಸಿಟ್ಟ ಬಳಿಕವೂ ಬೋಟ್ ಮುಳುಗಿದ್ದು, ಸುಮಾರು 50 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.