ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ ಇಬ್ಬರು ಮಕ್ಕಳ ಶವಗಳನ್ನು ಪೋಷಕರು ಉಪ್ಪಿನ ಗುಡ್ಡೆಯಲ್ಲಿ ಹೂತಿಟ್ಟು ಬದುಕಿಸಲು ಯತ್ನಿಸಿದ ವಿಚಿತ್ರ ಘಟನೆ ತಾಲೂಕಿನ ಘಾಳಪುಜಿ ಗ್ರಾಮದಲ್ಲಿ ನಡೆದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಯ್ಯನಕೆರೆಯಲ್ಲಿ ಭಾನುವಾರ ಈಜಲು ಹೋಗಿದ್ದನಾಗರಾಜ ಲಂಕೇರ(11) ಮತ್ತು ಹೇಮಂತ ಹರಿಜನ(12) ಎಂಬ ಇಬ್ಬರು ಬಾಲಕರು ಮುಳುಗಿ ಮೃತಪಟ್ಟಿದ್ದರು.
ಕೆಲ ದಿನಗಳಿಂದ ನೀರಲ್ಲಿ ಮುಳುಗಿಸತ್ತವರನ್ನು ಉಪ್ಪಿನಲ್ಲಿ ಮುಚ್ಚಿಟ್ಟರೆ ಬದುಕುತ್ತಾರೆ ಎಂಬ ವಿಡಿಯೊ ಹಿಂದೆ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಇದನ್ನೇ ನಂಬಿಕೊಂಡು ಹಲವು ದಿನಗಳಿಂದ ಕೂಡ, ಇದೇ ರೀತಿಯ ಘಟನೆ ನಡೆಯುತ್ತಿದ್ದಾವೆ.
ಈ ನಡುವೆ ಭಾನುವಾರ ಕೂಡ ನೀರಿಗೆ ಬಿದ್ದು ಸಾವನ್ನಪ್ಪಿದ್ದ ಮಕ್ಕಳು ಕೂಡ ಸಾವನ್ನಪ್ಪಿದ್ದವರು. ಈ ನಡುವೆ ವೈರಲ್ ಸುಳ್ಳು ಮಾಹಿತಿಯನ್ನು ನಂಬಿದ ಪೋಷಕರು ಮಕ್ಕಳ ಮೃತದೇಹಗಳನ್ನು ಕೆರೆಯಿಂದ ಹೊರ ತೆಗೆದು ಕ್ವಿಂಟಾಲ್‌ಗಟ್ಟಲೇ ಉಪ್ಪಿನ ರಾಶಿಯಲ್ಲಿ ಸತತ 6 ತಾಸು ಇಟ್ಟು ಬದುಕಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಭಾನುವಾರ ರಾತ್ರಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಪೋಲಿಸ್ ಸಿಬ್ಬಂದಿ ಮೃತ ಬಾಲಕರ ಮನೆಗೆ ತೆರಳಿ ಪೋಷಕರಿಗೆ ಬುದ್ದಿವಾದ ಹೇಳಿ, ಮುಂದಿನ ಸೂಕ್ತ ಕ್ರಮಕ್ಕಾಗಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ಪೋಸ್ಟ್‌ಗಳನ್ನು ನಂಬಬಾರದು. ಬ್ಯಾಡಗಿ ಸಿಪಿಐ ಮಹಾಂತೇಶ ಲಂಬಿ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ.