ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡುವ ಪೊಲೀಸರಿಗೆ ಬಿಗ್ ಶಾಕ್ ಎದುರಾಗಿದ್ದು, ಇನ್ಮುಂದೆ ಅಪ್ಪಿತಪ್ಪಿಯೂ ನಿದ್ರೆಗೆ ಜಾರುವಂತಿಲ್ಲ ಈ ಬಗ್ಗೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಲು ಹೊಸ ಪ್ಲ್ಯಾನ್ ಹಾಕಿದ್ದಾರೆ.
ಈಗಾಗಲೇ ಬೆಂಗಳೂರಿನ ಆಗ್ನೇಯ ವಿಭಾಗ ಪೊಲೀಸರು ನಿದ್ದೆ ಮಾಡುತ್ತಾರೆ, ಬೇರೆ ಕಡೆ ಹೋಗಿ ಕಾಲಾಹರಣ ಮಾಡುತ್ತಾರೆ ಎನ್ನುವ ಗಂಭೀರ ಆರೋಪದ ಮೇರೆಗೆ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮೆರಾ ಅಳವಡಿಸಲಾಗುತ್ತಿದೆ.
ಪೊಲೀಸರು ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಬಾಡಿವೋರ್ನ್ ಕ್ಯಾಮೆರಾ ಆನ್‌ನಲ್ಲೇ ಇಟ್ಟು ಕೊಂಡಿರಬೇಕು. ಆ ಕ್ಯಾಮೆರಾ ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡು ಇರಬೇಕು. ಕ್ಯಾಮೆರಾದಲ್ಲಿ ಈ ಕೃತ್ಯಗಳು ಕಂಡು ಬಂದ್ರೆ ಅಂತಹ ಪೊಲೀಸರ ಮೇಲೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೈಟ್ ಶಿಫ್ಟ್ ಪೊಲೀಸರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ