ಮಂಗಳೂರು: ದೇಶದಲ್ಲಿ ಭಾರಿ ಸದ್ದು ಮಾಡಿದ್ದ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿ ಒಂದು ವರ್ಷ ಸಂದಿದೆ. 2022ರ ನವೆಂಬರ್ 19 ರಂದು ಮಂಗಳೂರಿನಲ್ಲಿ ಬಾಂಬ್ ಸ್ಫೋಟವಾಗಿತ್ತು. ಪ್ರಕರಣದಲ್ಲಿ ಬಂಧಿತನಾಗಿದ್ದ ಶಾರೀಕ್ ಕುಕ್ಕರ್ ತೆಗೆದುಕೊಂಡು ಸ್ಫೋಟಿಸಲು ರಿಕ್ಷಾದಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಏಕಾಏಕಿ ಸಿಡಿದಿತ್ತು.
ಈ ನಡುವೆ ಮಂಗಳೂರು ಕದ್ರಿ ಮಂಜುನಾಥ ದೇಗುಲ ಸಮೀಪ ಬಾಂಬ್ ಬ್ಲಾಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದು ವರ್ಷದ ನಂತರ NIA ಚಾರ್ಚ್ ಶೀಟ್ ಅನ್ನು ಸಲ್ಲಿಸುವುದಕ್ಕೆ ಮುಂದಾಗಿದೆ. ಈ ನಡುವೆ NIA ಚಾರ್ಚ್ ಶೀಟ್‌ನಲ್ಲಿ ಆರೋಪಿಗಳು ಮುಂದಿನ ಕಾರ್ಯಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ. ಇದಲ್ಲದೇ ತಮ್ಮ ಕೆಲಸಕ್ಕೆ ಎಲ್ಲಿಂದ ಹಣ ಬರುತ್ತದೆ ಎನ್ನುವುದನ್ನು ಕೂಡ ತನಿಖೆ ವೇಳೆ ತಿಳಿದು ಬಂದಿದೆ ಎನ್ನಲಾಗಿದೆ. ಪುರಾವೆಗಳನ್ನು ಕೂಡ ತನಿಖಾ ಸಂಸ್ಥೆ ಕಲೆ ಹಾಕಿದೆ ಎನ್ನಲಾಗಿದೆ. ಸುಮಾರು ಒಂದು ಸಾವಿರ ಪುಟಗಳನ್ನು ಒಳಗೊಂಡಿರುವ ಚಾರ್ಚ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ ಅಂತ ತಿಳಿದು ಬಂದಿದೆ.