ಬೆಂಗಳೂರು: ಪಿಎಸ್‌ಐ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪೌಲ್ ಬಂಧನವಾಗಿದೆ. ಕರ್ನಾಟಕದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಪೊಲೀಸ್ ಉನ್ನತ ಅಧಿಕಾರಿಯ ಬಂಧನವಾಗಿದೆ.
ಪಿಎಸ್‌ಐ ಪರೀಕ್ಷಾ ಅಕ್ರಮಕ್ಕೆ ನೇಮಕಾತಿಯಲ್ಲಿ ಇದು ದೊಡ್ಡ ಬಂಧನವಾಗಿದೆ. ಎಡಿಜಿಪಿ ಅಮೃತ್ ಪೌಲ್ ಬರೋಬ್ಬರಿ-25 ಅಭ್ಯರ್ಥಿಗಳ ಜೊತೆಗೆ ಅಮೃತ್ ಪೌಲ್ ಡೀಲ್ ಮಾಡಿದ್ದರು.
ತಲಾ 30 ಲಕ್ಷ ಹಣವನ್ನ ಅಮೃತ್ ಪೌಲ್ ಪಡೆದು, ಡಿವೈಎಸ್ಪಿ ಶಾಂತಕುಮಾರ್ ಅವರಿಂದ ಡೀಲ್ ಮಾಡಿಸುತ್ತಿದ್ದು,25 ಜನರ ಬಳಿ ಅಮೃತ್ ಪೌಲ್ ಒಟ್ಟು 5 ಕೋಟಿ ಡೀಲ್ ಮಾಡಿದ್ದರು.
545 ಪಿಎಸ್ ಐ ಹುದ್ದೆಗಳ ಡೀಲ್ ನಡೆದಾಗ ರಿಕ್ರ್ಯೂಟ್ ಮೆಂಟ್ ಎಡಿಜಿಯಾಗಿದ್ದ ಅಮೃತ್ ಪೌಲ್ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಡಿವೈ ಎಸ್ ಪಿ ಶಾಂತಕುಮಾರ್ ವಿಚಾರಣೆಯಲ್ಲಿ ಅಮೃತ್ ಪೌಲ್ ಹೆಸರು ಬಾಯ್ಬಿಟ್ಟಿದ್ದು, ಈಗ ಎಡಿಜಿಪಿ ಅಮೃತ್ ಪೌಲ್ ಅರೆಸ್ಟ್ ಆಗಿದ್ದಾರೆ.