ಮುಂಬೈ (ಮಹಾರಾಷ್ಟ್ರ): ಏಳು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳನ್ನು ಹೊತ್ತ ಹೆಲಿಕಾಪ್ಟರ್ ಮುಂಬೈ ಹೈನಲ್ಲಿರುವ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಷನ್ ಲಿಮಿಟೆಡ್ (ONGC) ರಿಗ್ ಬಳಿ ಸಾಗರ್ ಕಿರಣ್ ಬಳಿ ಇಂದು ಅರಬ್ಬಿ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಕಂಪನಿ ಹೇಳಿದೆ.
ಈ ಘಟನೆ ನಡೆದಿರುವ ಸ್ಥಳವು ಮುಂಬೈನಿಂದ ಅರಬ್ಬಿ ಸಮುದ್ರದೊಳಗೆ 7 ನಾಟಿಕಲ್ ಮೈಲಿ ದೂರದಲ್ಲಿದೆ. ಇದುವರೆಗೆ ಒಟ್ಟು ಆರು ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಒಎನ್‌ಜಿಸಿ ತಿಳಿಸಿದೆ. ಅಧಿಕೃತ ಮೂಲಗಳ ಪ್ರಕಾರ ಭಾರತೀಯ ಕೋಸ್ಟ್ ಗಾರ್ಡ್ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ಕೋಸ್ಟ್ ಗಾರ್ಡ್ ಎರಡು ಹಡಗುಗಳನ್ನು ಸ್ಥಳದ ಕಡೆಗೆ ತಿರುಗಿಸಿದೆ. ದಮನ್‌ನಿಂದ ಟೇಕಾಫ್ ಆದ ಡಾರ್ನಿಯರ್ ವಿಮಾನವು ಒಂದು ಲೈಫ್ ರಾಫ್ಟ್ ಅನ್ನು ಈ ಪ್ರದೇಶದಲ್ಲಿ ಬೀಳಿಸಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.