ನವದೆಹಲಿ: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಜಯ ಲಭಿಸಿದ್ದು, ಇತ್ತೀಚೆಗೆ ಅಜಾಗರೂಕತೆಯಿಂದ ಆಕಸ್ಮಿಕವಾಗಿ ಪಾಕಿಸ್ತಾನ ಗಡಿ ಪ್ರವೇಶ ಮಾಡಿದ್ದ BSF ಯೋಧ ಕೊನೆಗೂ ಬಿಡುಗಡೆಯಾಗಿದ್ದಾನೆ.

ಹೌದು.. ಈ ಹಿಂದೆ ಅಂದರೆ ಏಪ್ರಿಲ್ ನಲ್ಲಿ ಭಾರತ ಪಾಕ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಜಾಗರೂಕತೆಯಿಂದ ಪಾಕಿಸ್ತಾನ ಗಡಿ ಪ್ರವೇಶ ಮಾಡಿದ್ದ ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಪೂರ್ಣಂ ಕುಮಾರ್ ಶಾನನ್ನು ಪಾಕಿಸ್ತಾನ ಸೇನೆ ಬಿಡುಗಡೆ ಮಾಡಿದೆ. ಈಗಾಗಲೇ ಯೋಧ ಪಿಕೆ ಶಾನನ್ನು ಭಾರತದ ವಶಕ್ಕೆ ನೀಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪೂರ್ಣಮ್ ಕುಮಾರ್ ಶಾ ಅವರನ್ನು ಅಮೃತಸರದ ಅಟ್ಟಾರಿಯಲ್ಲಿರುವ ಜಂಟಿ ಚೆಕ್ ಪೋಸ್ಟ್ ಮೂಲಕ ಬೆಳಿಗ್ಗೆ 10.30 ರ ಸುಮಾರಿಗೆ ಹಸ್ತಾಂತರಿಸಲಾಯಿತು ಎಂದು ಬಿಎಸ್ಎಫ್ ತಿಳಿಸಿದೆ. ಏಪ್ರಿಲ್ 23, 2025 ರಿಂದ ಪಾಕಿಸ್ತಾನ ರೇಂಜರ್ಗಳ ವಶದಲ್ಲಿದ್ದ ಜವಾನ್ ಪಿಕೆ ಶಾ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಬುಧವಾರ ತಿಳಿಸಿದೆ.