Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉದ್ಯಮಿ ಕಿಡ್ನ್ಯಾಪ್ ಪ್ರಕರಣ; ಇಬ್ಬರು ಆರೋಪಿಗಳು ಅರೆಸ್ಟ್..!
    ಇತ್ತೀಚಿನ ಸುದ್ದಿ

    ಉದ್ಯಮಿ ಕಿಡ್ನ್ಯಾಪ್ ಪ್ರಕರಣ; ಇಬ್ಬರು ಆರೋಪಿಗಳು ಅರೆಸ್ಟ್..!

    January 12, 2024
    Share

    ಬೆಂಗಳೂರು: ಐಎ ಎಸ್ ಹಾಗೂ ಐಪಿಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಯುವಕನೊಬ್ಬ ಉದ್ಯಮಿಯನ್ನು ಕಿಡ್ನ್ಯಾಪ್ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಉದ್ಯಮಿ ಚೇತನ್ ಷಾ ಎಂಬುವವರನ್ನು ಕಿಡ್ನ್ಯಾಪ್ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಸಚಿನ್ ಹಾಗೂ ಗೌರಿ ಶಂಕರ್ ಬಂಧಿತ ಆರೋಪಿಗಳು.

    ಉದ್ಯಮಿ ಚೇತನ್ ಷಾ, ತನ್ನ ಮಗಳಿಗೆ ಬಿಬಿಎ ಸೀಟ್ ಕೊಡಿಸಲು ಓಡಾಡುತ್ತಿದ್ದರು. ಈ ವೇಳೆ ಸಚಿನ್ ಎಂಬಾತ ಚೇತನ್ ಷಾ ಸಂಪರ್ಕಕ್ಕೆ ಬಂದಿದ್ದ. ತಾನು ಬಿವಿಎ ಸೀಟ್ ಕೊಡಿಸುವುದಾಗಿ ಹೇಳಿ ಹಣ ಕೇಳಿದ್ದ. ಇದೇ ವೇಳೆ ಚೇತನ್ ಷಾ ಅವರ ಮಗಳಿಗೆ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಕಾಲೇಜು ನಿಯಮದಂತೆ ಸೀಟ್ ಸಿಕ್ಕಿತ್ತು. ಆದರೆ ಸಚಿನ್ ಆ ಸೀಟ್ ತಾನು ಕೊಡಿಸಿದ್ದು ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದ. ಹಣ ನೀಡಲು ಚೇತನ್ ಷಾ ನಿರಾಕರಿಸಿದ್ದರು.

    ಇದರಿಂದ ಉದ್ಯಮಿ ಚೇತನ್ ಷಾ ಕಿಡ್ನ್ಯಾಪ್ ಗೆ ಸಚಿನ್ ಸಂಚು ರೂಪಿಸಿ, ತನ್ನ ಸಹಚರರ ಜೊತೆ ಸೇರಿ ಆಟೋದಲ್ಲಿ ಕಿಡ್ನ್ಯಾಪ್ ಮಾಡಿ ಬಳಿಕ ಕಾರಿನಲ್ಲಿ ಕರೆದೊಯ್ದಿದ್ದರು. ಹಣ ಕೈ ಸೇರುವವರೆಗೂ ಕಾರಿನಲ್ಲಿ ಇಡೀ ಬೆಂಗಳೂರನ್ನು ಸುತ್ತಾಡಿಸುತ್ತಲೇ ಇದ್ದರು. ಕೊನೆಗೆ ಉದ್ಯಮಿಯಿಂದ 7 ಲಕ್ಷ ಹಣ ಪಡೆದು ಕಾರಿನಿಂದ ಇಳಿದು ಆರೋಪಿಗಳು ಪರಾರಿಯಾಗಿದ್ದರು.

    ರಾಜಾಜಿನಗರ ಠಾಣೆಯಲ್ಲಿ ಉದ್ಯಮಿ ಚೇತನ್ ಷಾ ದೂರು ನೀಡಿದ್ದರು. ಇದೀಗ ಪ್ರಕರಣ ಸಂಬಂಧ ಆರೋಪಿ ಸಚಿನ್ ಹಾಗೂ ಗೌರಿ ಶಂಕರ್ ನನ್ನು ಪೊಲೀಸರು ಬಂಧಿಸಿದ್ದು, 7 ಲಕ್ಷ ಹಣ ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ.

    Post Views: 268

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.