ಬಂಟ್ವಾಳ: ಮಾಣಿಯಲ್ಲಿ ನಡೆದ ಇತ್ತಂಡದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಇತ್ತಂಡದ ಇಬ್ಬರು ಗ್ರಾ.ಪಂ ಸದಸ್ಯರು ಸೇರಿದಂತೆ ಒಟ್ಟು 9 ಮಂದಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಅನಂತಾಡಿ ನಿವಾಸಿ ಈಶ್ವರ ನಾಯ್ಕ ಯಾನೆ ಪ್ರವೀಣ್ ನಾಯ್ಕ (28) ಅವರು ನೀಡಿದ ದೂರಿನಂತೆ ಮಹೇಂದ್ರ, ಪ್ರಶಾಂತ್, ಚಿರಂಜೀವಿ, ಪ್ರವೀಣ್, ದೇವಿಪ್ರಸಾದ್, ಹರೀಶ್ ಅವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಕೊಡಾಜೆ ನಿವಾಸಿ ಮಹೇಂದ್ರ (26) ಅವರು ನೀಡಿದ ದೂರಿನಂತೆ ಆರೋಪಿಗಳಾದ ಮಂಜುನಾಥ, ರಾಕೇಶ್, ಪ್ರವೀಣ್ ಅನಂತಾಡಿ ಅವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಪ್ರವೀಣ್ ನೀಡಿದ ದೂರಿನಲ್ಲೇನಿದೆ..?ನಾನು ಬ್ಯಾಂಕ್ ರಿಕವರಿ ಕರ್ತವ್ಯ ನಿರ್ವಹಿಸಿಕೊಂಡು ಸಂಗ್ರಹವಾದ ಹಣದೊಂದಿಗೆ ಬೈಕ್‌ನಲ್ಲಿ ಮಾಣಿ ಕಡೆಗೆ ಹೊರಟು ಸುಮಾರು 2.00 ಗಂಟೆಯ ವೇಳೆಗೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಪಟ್ಟಕೋಡಿ ಎಂಬಲ್ಲಿ ತಲುಪಿದಾಗ ಪರಿಚಯದ ಮಹೇಂದ್ರ, ಪ್ರಶಾಂತ್, ಚಿರಂಜೀವಿ, ಪ್ರವೀಣ್ ರವರು ಬಿಳಿ ಬಣ್ಣದ ಸ್ವೀಫ್ಟ್ ಕಾರು, ಪಿಕ್ ಅಪ್ ಹಾಗೂ ಕೆಂಪು ಬಣ್ಣದ ಬ್ರಿಜಾ ಕಾರಿನಲ್ಲಿ ನಿಂತುಕೊಂಡಿದ್ದು ಪ್ರವೀಣ್ ನನ್ನು ನೋಡಿ ಏಕಾಏಕಿ ಬ್ರಿಜಾ ಕಾರನ್ನು ಚಲಾಯಿಸಿ ಮುಂದಕ್ಕೆ ಹೋಗದಂತೆ ತಡೆದು ಆ ಕಾರಿನಲ್ಲಿದ್ದ ದೇವಿಪ್ರಸಾದ್ ಎಂಬಾತನು ಇಳಿದು ಬಂದು ಅದೇ ಸಮಯ ಸ್ವೀಫ್ಟ್ ಕಾರಿನಿಂದ ಹರೀಶ್, ಮಹೇಂದ್ರ, ಪ್ರಶಾಂತ, ಚಿರಂಜೀವಿ, ಪ್ರವೀಣ್ ರವರು ಸುತ್ತುವರೆದು ಮಹೇಂದ್ರನು ದೂರುದಾರರಾದ ಪ್ರವೀಣ್‌ರವರ ಬೈಕ್ ಕೀ ಯನ್ನು ಕಸಿದುಕೊಂಡು, ಬೈದು “ಮಂಜು ಮತ್ತು ರಾಕೇಶ್ ಎಲ್ಲಿದ್ದಾರೆ? ಕಾಲರ್ ಪಟ್ಟಿಯನ್ನು ಹಿಡಿದು ಎಲೆಕ್ಷನ್ ಕೌಂಟಿಂಗ್ ದಿನ ಬಾರಿ ದುರಂಹಕಾರ ತೋರಿಸಿದ್ದಿ ಎಂದು ಕೆನ್ನೆಗೆ ಹೊಡೆದು ಮಹೇಂದ್ರನು ಟೀಶರ್ಟ್‌ನ್ನು ಹರಿದು ಹಾಕಿ, ಬೈಕ್ ನಲ್ಲಿದ್ದ 13,000/- ಹಣವಿದ್ದ ಚೀಲವನ್ನು ಪ್ರಶಾಂತ್ ಎಂಬಾತನು ತೆಗೆದಿದ್ದಾನೆ. ಈ ವೇಳೆ ದೇವಿಪ್ರಸಾದ್ ಎಂಬಾತ ಪ್ರವೀಣ್ ಅವರ ಬೆನ್ನಿಗೆ ಕೈಯಿಂದ ಹೊಡೆದು ನೆಲಕ್ಕೆ ದೂಡಿದ್ದು, ಚಿರಂಜೀವಿ ಎಂಬಾತನು ಕುತ್ತಿಗೆಯ ಹಿಂಭಾಗ ಗುದ್ದಿದ್ದು, ಅಲ್ಲೆ ಇದ್ದ ಪಿಕ್ ಅಪ್ ನಿಂದ ರಾಡ್ ನ್ನು ತೆಗೆದು ತಲೆಗೆ ಹೊಡೆದು ಕೊಲ್ಲಲು ಬಂದಾಗ ತಪ್ಪಿಸಿಕೊಂಡಿದ್ದೇನೆ. ಅದೇ ಸಮಯ ಪ್ರವೀಣ್ ಮತ್ತು ಇತರರು ದೂರುದಾರ ಪ್ರವೀಣ್‌ನನ್ನು ಉದ್ದೇಶಿಸಿ “ಸೂಳೆ ಮಗನೇ ಈ ದಿನ ಬದುಕಿದ್ದೀ ಬೇವಾರ್ಸಿ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ದೂಡಿ ಹಾಕಿ, ನಿನ್ನ ಹಣವನ್ನು ನಿನ್ನ ಬೊಜ್ಜದ ಖರ್ಚಿಗೆ ಕೊಡುತ್ತೇನೆ ಎಂದು ಹೇಳಿಹೋಗಿದ್ದು, ಪ್ರವೀಣ್ ಅವರು ತನ್ನ ಗೆಳೆಯ ವಿವೇಕ್ ನಿಗೆ ವಿಷಯ ತಿಳಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಹೇಂದ್ರ ನೀಡಿದ ದೂರಿನಲ್ಲೇನಿದೆ..? ಮಹೇಂದ್ರ ತನ್ನ ಅಕ್ಕನ ಆಕ್ಟಿವಾ ಹೊಂಡಾದಲ್ಲಿ ಮಾಣಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾದಿಂದ ಅಡವಿಟ್ಟ ಚಿನ್ನದ ಸರ ಬಿಡಿಸಿ ತನ್ನ ಪುತ್ತೂರು-ಬಂಟ್ವಾಳ ರಸ್ತೆಯಲ್ಲಿ ಹೋಗುತ್ತಿರುವ ಸಮಯ ಸುಮಾರು 13.45 ಗಂಟೆಗೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಜಂಕ್ಷನ್ ನಲ್ಲಿರುವ ನಾಗರಾಜ್ ಫೈನಾನ್ಸ್ ಕಛೇರಿಯ ಮುಂಭಾಗ ತಲುಪಿದಾಗ ರಸ್ತೆಯ ಬದಿ ನಾಗುವಿನ ಸಹಚರರೊಬ್ಬರು ಮಹೇಂದ್ರ ಅವರಿಗೆ ತಲವಾರು ಬೀಸಿದ್ದು, ತಪ್ಪಿಸಿಕೊಂಡು ಬುಡೋಳಿ ಕಡೆಗೆ ಹೋಗುತ್ತಿರುವ ವೇಳೆ ಮಾಣಿ ಜಂಕ್ಷನ್ ನಲ್ಲಿ ಮಹೇಂದ್ರ ಅವರ ಆಕ್ಟಿವಾ ಸ್ಕೂಟರ್ ಗೆ ಹಿಂದಿನಿಂದ ವಾಹನವೊಂದನ್ನು ಡಿಕ್ಕಿ ಹೊಡೆದಿದೆ. ಈ ವೇಳೆ ಮಹೇಂದ್ರ ಅವರು ರಸ್ತೆಗೆ ಬಿದ್ದಿದ್ದು, ಡಿಕ್ಕಿ ಹೊಡೆದ ಓಮಿನಿ ಕಾರೊಂದರಿಂದ ರಾಕೇಶ್, ಮಂಜುನಾಥ್ ಕೈಯಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದುಕೊಂಡು ಬಂದು ರಾಕೇಶ್ ರವರು ವಿಕೇಟ್ ನಿಂದ ಮುಖಕ್ಕೆ, ತಲೆಗೆ ಹೊಡೆದಿದ್ದು, ಮಂಜುನಾಥ್ ರವರು ಬ್ಯಾಟ್ ನಿಂದ ಕಾಲಿಗೆ ಮತ್ತು ತಲೆಗೆ ಹೊಡೆದಿದ್ದು ಅವರೊಂದಿಗೆ ಇದ್ದ ಅನಂತಾಡಿ ಪ್ರವೀಣ್ ಕೂಡ ವಿಕೆಟ್ ನಿಂದ ಮಹೇಂದ್ರ ಅವರ ತಲೆಗೆ ಹೊಡೆದಿದ್ದಾರೆ. ಮಂಜುನಾಥ್ ಕೈಯಲ್ಲಿದ್ದ ವಿಕೆಟ್ ತುಂಡಾದ ಬಳಿಕ ಇತರರ ಕೈಯಿಂದ ಕಬ್ಬಿಣದ ರಾಡ್ ತೆಗೆದು ಹಣೆಗೆ ಹೊಡೆದು ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಎಳೆದು ನೀನು ಬಾರಿ ಜಿಜೆಪಿಯಲ್ಲಿ ಕೆಲಸ ಮಾಡುತ್ತೀಯಾ ಎಂದು ಹೇಳಿದ್ದು, ಈ ವೇಳೆ ಮಹೇಂದ್ರ ಅವರು ನೋವಿನಿಂದ ಬೊಬ್ಬೆ ಹೊಡೆದಾಗ “ನಿನ್ನನ್ನು ಇನ್ನು ಮುಂದೆಯದರು ಕೊಲ್ಲೆದೇ ಬಿಡುವುದಿಲ್ಲ” ಎಂದು ಹೇಳಿ ಓಮಿನಿ ಕಾರಿನಲ್ಲಿ ತೆರಳಿದ್ದಾರೆ. ಕಾಂಗ್ರೇಸ್ ಕಾರ್ಯಕರ್ತರಾದ ರಾಕೇಶ್, ಮಂಜುನಾಥ್, ರಾಜೇಶ್ ಮತ್ತು ಇತರರು ಕೊಲ್ಲುವ ಉದ್ದೇಶದಿಂದ ತಲವಾರು ಬೀಸಿ, ವಿಕೆಟ್, ಬ್ಯಾಟ್, ಕಬ್ಬಿಣದ ರಾಡ್ ನಿಂದ ಹೊಡೆದು ಕತ್ತಿನಲ್ಲಿಂದ ಚಿನ್ನದ ಸರವನ್ನು ಕಸಿದುಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ ಎಂದು ದೂರಿನಲ್ಲಿ ತಿಳಿಸಲಾಗಿದೆ.