ಪುತ್ತೂರು : ನಾಪತ್ತೆಯಾಗಿದ್ದ ಪಿಎಚ್.ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ವಿದೇಶಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸ್ ಮೂಲಗಳು ಈ ವಿಷಯವನ್ನು ಧೃಡಿಕರಿಸಿವೆ.
ದಕ್ಷಿಣ ಕನ್ನಡ ಪುತ್ತೂರಿನ ಪುರುಷರಕಟ್ಟೆ ನಿವಾಸಿ ಚೈತ್ರಾ ಹೆಬ್ಬಾರ್ ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿ ಶಾರೂಕ್ ಶೇಖ್ ಸ್ನೇಹಿತನ ನೆರವಿನಲ್ಲಿ ವಿದೇಶಕ್ಕೆ ವಿಸಿಟಿಂಗ್ ವೀಸಾದಲ್ಲಿ ಚೈತ್ರಾ ಹೆಬ್ಬಾರ್ ಹಾರಿದ್ದಾಳೆ ಎಂದು ತಿಳಿದು ಬಂದಿದೆ. ಮಂಗಳೂರಿನ ಉಳ್ಳಾಲ ಕೋಟೆಕಾರು ಮಾಡೂರಿನ ಪಿಜಿಯಿಂದ ಫೆ.17 ಕ್ಕೆ ಪಿಹೆಚ್‌ಡಿ ವ್ಯಾಸಆಂಗ ಮಾಡುತ್ತಿದ್ದ ಚೈತ್ರಾ ಏಕಾಎಕಿ ನಾಪತ್ತೆಯಾಗಿದ್ದಳು. ಫೆ.18 ಕ್ಕೆ ಶಾರೂಕ್ ಶೇಖ್ ಕೂಡಾ ನಾಪತ್ತೆಯಾಗಿದ್ದು ಬಳಿಕ ಇವರು ಬೆಂಗಳೂರಿಗೆ ತೆರಳಿದ್ದರು. ಅಲ್ಲಿಂದ ಹಿಮಾಚಲ ಪ್ರದೇಶದ ಮನಾಲಿಗೆ ತೆರಳಿದ್ದರು ಅಲ್ಲಿಂದ ಬಳಿಕ ದೆಹಲಿ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಚೈತ್ರಾ ಮಾತ್ರ ಹಾರಿದ್ದಾಳೆ. ಚೈತ್ರಾ ವಿದೇಶಕ್ಕೆ ಹಾರಿದ ಬಳಿಕ ಶಾರೂಕ್ ಶೇಖ್ ನನ್ನು ಪೊಲೀಸರು ಪತ್ತೆ ಹಚ್ಚಿವಿಚಾರಣೆಗೆಂದು ಉಳ್ಳಾಲ ಪೋಲೀಸ್ ಠಾಣೆಗೆ ಕರೆ ತಂದಿದ್ದರು. ಆದ್ರೆ ಚೈತ್ರಾ ಶಾರೂಕ್ ಜೊತೆ ಇದ್ದ ಎನ್ನುವುದಕ್ಕೆ ಯಾವುದೇ ದಾಖಲೆ ಇಲ್ಲದ ಕಾರಣ ಪೊಲೀಸರು ಶಾರೂಕ್ ನನ್ನು ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಆದ್ರೆ ವಿದೇಶದಲ್ಲಿ ಯಾವುದೇ ಸಂಬಂಧಗಳಿಲ್ಲದ ಚೈತ್ರಾಳಿಗೆ ವಿದೇಶದ ವೀಸಾ ಕಳುಹಿಸಿದವರು ಯಾರು ? ವೀಸಾ ಕಳುಹಿಸಿದ ವ್ಯಕ್ತಿಗೂ ಚೈತ್ರಾಳಿಗೂ ಇರುವ ನಂಟೇನು ? ಎಂಬುವುದು ಇನ್ನೂ ನಿಗೂಢವಾಗಿದ್ದು ಒಟ್ಟಾರೆ ಚೈತ್ರಾ ಪ್ರಕರಣ ಪೊಲೀಸರಿಗೂ ಗೊಂದಲದ ಗೂಡಾಗಿದೆ.