ಕಲಬುರಗಿ- ಸಾಮಾನ್ಯವಾಗಿ ಉದ್ಯಮಿ ಗಳು, ರಾಜಕಾರಣಿಗಳು, ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡುವುದನ್ನು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಖತರ್ನಾಕ್ ಮಹಿಳೆ ಪೊಲೀಸ್ ಕಾನ್ಸಟೇಬಲ್ ಒಬ್ಬರನ್ನು ಹನಿ ಟ್ರ್ಯಾಪ್ ಖೆಡ್ಡಾಗೆ ಖೆಡವಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ.
ಖತರ್ನಾಕ ಮಹಿಳೆಯೊಬ್ಬರು ಪೊಲೀಸರನ್ನೇ ಹನಿ ಟ್ರ್ಯಾಪ್ ಖೆಡ್ಡಾಗೆ ಕೆಡವಿ ಬರೊಬ್ಬರಿ 8 ಲಕ್ಷ ರೂ. ಹಣ ವಸೂಲು ಮಾಡಿದ್ದಾಳೆ. ಈ ಖತರ್ನಾಕ್ ಲೇಡಿಯ ಕಾಟಕ್ಕೆ ಬೇಸತ್ತು ಕಾನ್ಸಟೇಬಲ್ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಹಿಂದೆ ಕಲಬುರಗಿಯಲ್ಲಿ ನಡೆದ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಈ ಪೂಜಾ ಭಾಗಿಯಾಗಿದ್ದಳು.
ಕಲಬುರಗಿಯ ಸೆನ್ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್‌ನನ್ನು ಪೂಜಾ ಡೊಂಗರಗಾಂವ್ ಎಂಬ ಮಹಿಳೆ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದಾಳೆ. ಆ ಬಳಿಕ ಕಾನ್ಸಟೇಬಲ್ ಪತ್ನಿಯಿಂದ ಎಂಟು ಲಕ್ಷ ಹಣ ವಸೂಲಿ ಮಾಡಿದ್ದಾಳಂತೆ. ಆರೋಪಿ ಪೂಜಾ ಡೊಂಗರಗಾಂವ್ ಕಾಟಕ್ಕೆ ಬೇಸತ್ತು ಕಾನ್ಸಟೇಬಲ್ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಪೂಜಾ ಮತ್ತು ಅಮರ್ ಸಿಂಗ್ ಎಂಬುವರಿಂದ 15 ಲಕ್ಷಕ್ಕೆ ಬೇಡಿಕೆ ಇಟ್ಟು 8 ಲಕ್ಷ ಹಣ ವಸೂಲಿ ಮಾಡಿದ್ದಳು. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.