Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಚೆಕ್ ಬೌನ್ಸ್ ಕೇಸ್: ಪೆಟ್ರೋಲ್ ಸಾಲ ಪಡೆದಿದ್ದ ಬಸ್ ಮಾಲಕಿಗೆ ಜೈಲು ಶಿಕ್ಷೆ
    ಇತ್ತೀಚಿನ ಸುದ್ದಿ

    ಮಂಗಳೂರು: ಚೆಕ್ ಬೌನ್ಸ್ ಕೇಸ್: ಪೆಟ್ರೋಲ್ ಸಾಲ ಪಡೆದಿದ್ದ ಬಸ್ ಮಾಲಕಿಗೆ ಜೈಲು ಶಿಕ್ಷೆ

    March 6, 2025
    Share

    ಮಂಗಳೂರು: ಮಂಗಳೂರಿನ ಪೆಟ್ರೋಲ್ ಪಂಪ್ ನಿಂದ ಸಾಲದ ರೂಪದಲ್ಲಿ ಪೆಟ್ರೋಲ್ ಪಡೆದು ಲಕ್ಷಾಂತರ ರೂಪಾಯಿ ವಂಚಿಸಿದ ಬಸ್ ಮಾಲಕಿಯೊಬ್ಬರಿಗೆ ಚೆಕ್ ಅಮಾನ್ಯ ಪ್ರಕರಣದಲ್ಲಿ 5ನೇ ಜೆಎಂಎಫ್.ಸಿ ನ್ಯಾಯಾಲಯ ಜೈಲು ಶಿಕ್ಷೆ ಪ್ರಕಟಿಸಿದೆ.

    ಮಂಗಳೂರಿನ ಶೇಡಿಗುಡ್ಡೆ ಪಿವಿಎಸ್ ವೃತ್ತದಲ್ಲಿ ಸಿಟಿ ಪ್ಲಾಜಾ ಕಟ್ಟಡದಲ್ಲಿ ಆರೆಂಜ್ ಟೂರ್ಸ್ ಆಂಡ್ ಟ್ರಾವೆಲ್ಸ್ ಮತ್ತು ಕೆನರಾ ಬಸ್ ಎಂಬ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದ ಲೋಕೇಶ್ ಶೆಟ್ಟಿ ಅವರ ಪತ್ನಿ ಸುಕನ್ಯಾ ಶೆಟ್ಟಿ ಶಿಕ್ಷೆಗೊಳಗಾದ ಬಸ್ ಮಾಲಕಿಯಾಗಿದ್ದಾರೆ. ಅವರು ಮಂಗಳೂರಿನ ಪ್ರತಿಷ್ಠಿತ ಪೆಟ್ರೋಲ್ ಪಂಪ್ ನಿಂದ ಇಂಧನವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳುತ್ತಿದ್ದರು. 2020ರ ಫೆಬ್ರವರಿ ತಿಂಗಳಿನಲ್ಲಿ ಸಾಲ ಪಡೆದುಕೊಂಡಿದ್ದ ಬಿಲ್ ಪಾವತಿಸದೆ ಚೆಕ್ ನೀಡಿ ಅಮಾನ್ಯಗೊಳಿಸಿ ಪೆಟ್ರೋಲ್ ಪಂಪ್ ಮಾಲಕರನ್ನು ವಂಚಿಸಿದ್ದರು.

    ಸುಕನ್ಯಾ ಶೆಟ್ಟಿ ಅವರು ನೀಡಿದ ಎರಡು ಚೆಕ್ ಅಮಾನ್ಯಗೊಂಡಿದ್ದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಮಾಲಕರು ಮಂಗಳೂರಿನ 5ನೇ ಜೆಎಂಎಫ್.ಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
    ಈ ದೂರನ್ನು ವಿಚಾರಣೆಗೆ ಕೈಗೆತ್ತಿಕೊಂಡ ಜೆಎಂಎಫ್ ಸಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಚಿರಾಗ್ ಅವರು ಆರೋಪಿಗೆ ಎರಡೂ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಹಾಗೂ ದಂಡದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪೆಟ್ರೋಲ್ ಪಂಪ್ ಮಾಲಕರ ಪರ ಮಂಗಳೂರಿನ ನ್ಯಾಯವಾದಿ ಶ್ರೀ ಸುಕೇಶ್ ಕುಮಾರ್ ಶೆಟ್ಟಿ ಅವರು ವಾದ ಮಂಡಿಸಿದ್ದರು.

    Post Views: 231

    Related Posts

    ಮಂಗಳೂರು: ನಿವೃತ್ತ ಬ್ಯಾಂಕ್ ಮಹಿಳಾ ಉದ್ಯೋಗಿಗೆ ಸೈಬರ್ ವಂಚನೆ

    March 6, 2026

    ಬಜೆಟ್ 2026: ದ.ಕ ಜಿಲ್ಲೆಗೆ 2 ಹೊಸ ಪೊಲೀಸ್ ಠಾಣೆ ಸೇರಿ ಕರ್ನಾಟಕದಲ್ಲಿ 12 ಹೊಸ ಪೊಲೀಸ್ ಠಾಣೆ

    March 6, 2026

    ಮಂಗಳೂರು: ಕಾಲೇಜು ಯುವಕ-ಯುವತಿಯರಿಗೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ- 6 ಮಂದಿ‌ ಅರೆಸ್ಟ್

    March 6, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.