ಕೊಡಗು : ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ರೇಷ್ಮೆ ಹಡ್ಲು ಹಾಡಿಯಲ್ಲಿ ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಭಜರಂಗದಳದ ಕಾರ್ಯಕರ್ತರು ತರಾಟೆ ತೆಗೆದುಕೊಂಡಿದ್ದಲ್ಲದೇ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಐವರು ವಶಕ್ಕೆ ಪಡೆಯಲಾಗಿದೆ.
ಸಂಕ್ರಾಂತಿ ಹಬ್ಬದ ಹಿನ್ನೆಲೆ ಹಡ್ಲು ಹಾಡಿಯಲ್ಲಿರುವ ಆದಿವಾಸಿ ನಿವಾಸಿಗಳಿಗೆ ಎಳ್ಳು ಬೆಲ್ಲ ಹಂಚೋದಕ್ಕೆ ಭಜರಂಗದಳದ ಕಾರ್ಯಕರ್ತರು ತೆರಳಿದಾಗ ಬೈಬಲ್ ಬೋಧನೆಯನ್ನು ಮಾಡುತ್ತಿರುವು ಕಂಡು ಬಂದಿದೆ. ಆಗ ಭಜರಂಗದಳದ ಕಾರ್ಯಕರ್ತರು ತರಾಟೆ ತೆಗೆದುಕೊಂಡಿದ್ದಾರೆ. ಈ ಸಂಬಂದ ಈಗಾಗಲೇ ಸುಮಾರು 500 ಕುಟುಂಬಗಳಲ್ಲಿ 250 ಮಂದಿಯನ್ನು ಮತಾಂತರ ಆಗಿದ್ದಾರೆಂಬ ಆರೋಪಿಸಿದ್ದು, ಐವರು ಕ್ರಿಶ್ಚಿಯರನ್ನುವಶಕ್ಕೆ ಪಡೆದು ಕೂಡಲೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಸಂಬಂಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.