Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಳ್ಳಾಲ: ಜ್ವರದಿಂದ 6ನೇ ತರಗತಿ ವಿದ್ಯಾರ್ಥಿ ನಿಧನ
    ಇತ್ತೀಚಿನ ಸುದ್ದಿ

    ಉಳ್ಳಾಲ: ಜ್ವರದಿಂದ 6ನೇ ತರಗತಿ ವಿದ್ಯಾರ್ಥಿ ನಿಧನ

    December 30, 2022
    Share

    ಉಳ್ಳಾಲ : ಕಳೆದೆರಡು ದಿವಸಗಳಿಂದ ತಲೆನೋವು, ಜ್ವರದಿಂದ ಬಳಲುತ್ತಿದ್ದ ಶಾಲಾ ಬಾಲಕನೋರ್ವ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ.

    ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಅಶ್ವಿತ್ ಮೃತ ಬಾಲಕನಾಗಿದ್ದು ಈತ ಮೆದುಳು ಜ್ವರದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಎರಡು ದಿನಗಳಿಂದ ಜ್ವರ, ತಲೆನೋವು ಎನ್ನುತ್ತಿದ್ದ ಅಶ್ವಿತ್ ನಾಳೆ ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಸ್ಕಿಟ್ ನಲ್ಲೂ ಭಾಗವಹಿಸಲು ತಯಾರಿ ನಡೆಸಿದ್ದ. ವಿದ್ಯಾರ್ಥಿಯ ಅಕಾಲಿಕ ಮರಣದಿಂದ ಶಾಲಾ ಆಡಳಿತ ಮಂಡಳಿ ,ಕುಟುಂಬ ಹಾಗೂ ಸ್ಥಳೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

    ಎರಡು ವರ್ಷಗಳ ಹಿಂದೆ ಅಶ್ವಿತ್ ನ ತಂದೆ ಅವಘಡವೊಂದರಲ್ಲಿ ಸಾವನ್ನಪ್ಪಿದ್ದರು.ಕೊಲ್ಯ ಸಾರಸ್ವತ ಕಾಲನಿಯ ಮನೆಯಲ್ಲಿ ಅಶ್ವಿತ್ ತಾಯಿಯೊಂದಿಗೆ ವಾಸವಿದ್ದ. ಅಶ್ವಿತ್ ಶಾಲೆಯಲ್ಲೂ ಪ್ರತಿಭಾನ್ವಿತನಾಗಿದ್ದು ಶಿಕ್ಷಕರ ಪ್ರೀತಿ ಪಾತ್ರನಾಗಿದ್ದ. ಮೃತ ಅಶ್ವಿತ್ ಗೆ ಕೊನೆಯ ಕ್ಷಣದಲ್ಲಿ ಮಿದುಳು ಜ್ವರದ ಲಕ್ಷಣ ಇತ್ತೆಂದು ಹೇಳಲಾಗಿದೆ. ಆತನಿಗೆ ಮಿದುಳು ಜ್ವರದ ವ್ಯಾಕ್ಸಿನೇಷನ್‌ ಆಗಿದೆಯೇ ಎಂದು ಇನ್ನೂ ಧೃಡಪಟ್ಟಿಲ್ಲ. ಈ ಬಗ್ಗೆ ತಜ್ಞ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ.

    Post Views: 186

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.