ಈಗಾಗಲೇ ಕರ್ನಾಟಕ ವಿಧಾನಸಭೆ ಚುನಾವಣೆ ನೀತಿಸಂಹಿತೆ(code of conduct) ಜಾರಿಯಾಗಿದ್ದು ಮೇ.10ರಂದು ಮತದಾನ ಮತ್ತು ಮೇ.13 ರಂದು ಮತ ಎಣಿಕೆ ನಡೆಯಲಿದೆ.
ಈ ಹಿನ್ನಲೆ ನೀತಿ ಸಂಹಿತೆಯ ಕೆಲವು ನಿರ್ಬಂಧನೆಗಳು ಈ ಕೆಳಗಿನಂತಿವೆ.
1.ಹೊಸ ಕಾರ್ಯಕ್ರಮಗಳ ಅನುಷ್ಟಾನ, ಉದ್ಘಾಟನೆ ಮಾಡುವ ಹಾಗಿಲ್ಲ
2.ಯಾವುದೇ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತಿಲ್ಲ.
ಸಭೆ, ಸಮಾರಂಭಗಳ ನಡೆಸುವ ಮೊದಲು ಅನುಮತಿ ಪಡೆಯಬೇಕಾಗುತ್ತೆ.
4.ಬೈಕ್ ರ್ಯಾಲಿ, ಪ್ರಚಾರ ರ್ಯಾಲಿಗಳಿಗೆ ಅನುಮತಿ ಪಡೆಯುವುದು ಕಡ್ಡಾಯ.
5.ವಾಹನಗಳ ಮೇಲೆ ಪಕ್ಷದ ಬಾವುಟಗಳನ್ನು ಕಟ್ಟುವುದಕ್ಕೂ ಅನುಮತಿ ಬೇಕು.
ಹೊಸ ಟೆಂಡರ್‌ಗಳನ್ನೂ ಕರೆಯವುದಕ್ಕೆ ಅವಕಾಶವಿಲ್ಲ.
7.ಈಗಾಗಲೇ ಕರೆದಿರುವ ಟೆಂಡರ್‌ಗಳನ್ನು ಫೈನಲ್ ಮಾಡೋದಕ್ಕೂ ಆಗಲ್ಲ.
8. ಧ್ವನಿವರ್ದಕಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಬಳಸಬೇಕು.
9. ಕೇಂದ್ರದ ನಾಯಕರು ಪ್ರಚಾರಕ್ಕೆ ಬರುವುದಾದರೆ ಅನುಮತಿ ಪಡೆಯಬೇಕು.
10. ಮತದಾರರಿಗೆ ಆಮಿಷವೊಡ್ಡುವಂತಹ ಉಡುಗೊರೆಗಳನ್ನು ಕೊಡಬಾರದು.
11. ಜನಪ್ರತಿನಿಧಿಗಳು, ಮಂತ್ರಿಗಳ ಸರ್ಕಾರಿ ಕಾರನ್ನು ಬಳಸುವ ಹಾಗಿಲ್ಲ.