ಮಂಗಳೂರು : ಇಡೀ ರಾಜ್ಯವೇ ಬೆಚ್ಚಿಬೀಳಿಸುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಮಂಗಳೂರಿನ ಬಾಂಬ್ ಸ್ಪೋಟದ ಬೆನ್ನಟ್ಟಿದ ಪೊಲೀಸರಿಗೆ ಹಲವು ಸ್ಪೋಟಕ ಮಾಹಿತಿ ಸಿಕ್ಕಿದೆ. ಇದೀಗ ಎಫ್ ಎಸ್ ಎಲ್ ವರದಿಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಬಯಲಾಗಿದೆ.
ಶಂಕಿತ ಉಗ್ರ ಶಾರೀಕ್ ಬಳಿ ಇದ್ದದ್ದು ಅಂತಿಥ ಬಾಂಬ್ ಅಲ್ಲ ಎಂದು ಬಯಲಾಗಿದೆ. ಇದು ಅಂತಿಂಥ ಕುಕ್ಕರ್ ಬಾಂಬ್ ಅಲ್ಲ. ಆ ಕುಕ್ಕರ್ ಬಾಂಬ್ಗೆ ಇಡೀ ಬಸ್ಸನ್ನೇ ಸ್ಪೋಟಿಸುವ ಶಕ್ತಿ ಇತ್ತು ಎಂಬ ಸ್ಫೋಟಕ ವಿಚಾರ ಬಯಲಾಗಿದೆ. ಮಂಗಳೂರಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಶೀಲನೆ ನಡೆಸಿದ ತಂಡ ಈ ಬಾಂಬ್ ಸಾಮರ್ಥ್ಯದ ಬಗ್ಗೆ ಪ್ರಾಥಮಿಕ ವರದಿ ಸಲ್ಲಿಸಿದೆ.
ಪ್ಲಸ್ ಹಾಗೂ ಮೈನಸ್ ಡಿಟೆಕ್ಟ್ ಆಗದೇ ಶಾರ್ಟ್ ಸರ್ಕ್ಯೂಟ್ ಆಗಿದೆ. . ಜೆಲ್ ಹೊತ್ತಿಕೊಂಡು ಉರಿದ ಪರಿಣಾಮ ಸಣ್ಣ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿ ದಟ್ಟವಾದ ಹೊಗೆ ಬಂದಿದೆ ಎನ್ನಲಾಗಿದೆ. 3 ಲೀಟರ್ ಕುಕ್ಕರ್ ಒಳಗಡೆ ಸ್ಪೋಟಕದ ಜೆಲ್ ಇದ್ದು, ಇದರ ಜೊತೆ ಡಿಟೋನೇಟರ್, ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಕೂಡ ಇತ್ತು. ಪ್ಲಸ್ ಮತ್ತು ಮೈನಸ್ ಕನೆಕ್ಟ್ ಆಗದೇ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ ಎನ್ನಲಾಗಿದೆ.