ಉಡುಪಿ: ಅಜ್ಜರಕಾಡುವಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಜಿಲ್ಲಾಸ್ಪತ್ರೆ ಕಟ್ಟಡದ ಕಾಮಗಾರಿಗೆ ಸಂಬಂಧಿಸಿದ ತಾಮದ್ರ ಪೈಪ್ ಕಳವುಗೈದ ಪ್ರಕರಣದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಬೆAಗಳೂರು ಡಾ.ಶಿವರಾಮ ಕಾರಂತ ನಗರ ನಿವಾಸಿ ಮಹಮ್ಮದ್ ಜಾವೀದ್(೨೯) ಹಾಗೂ ತುಮಕೂರು ಜಿಲ್ಲೆಯ ಶಿರಾ ನಗರದ ಸಯ್ಯದ್ ದಾದಾ ಪಿರ್ ಲಿಯಾಕತ್(೨೮) ಬಂಧಿತ ಆರೋಪಿಗಳು. ಇವರಿಂದ ಕಳವು ಮಾಡಿದ್ದ ೨,೮೧,೦೦೦ರೂ. ಮೌಲ್ಯದ ತಾಮ್ರದ ಪೈಪ್ ತುಂಡುಗಳನ್ನು, ಕೃತ್ಯಕ್ಕೆ ಬಳಸಿದ ಕಾರು ಹಾಗೂ ಎಕ್ಷೆಲ್ ಪ್ರೇಮ್‌ನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ೬,೩೧,೫೦೦ರೂ. ಎಂದು ಅಂದಾಜಿಸಲಾಗಿದೆ.
ಇವರು ಜು.೨೦ರಂದು ಆಸ್ಪತ್ರೆಗೆ ಆಕ್ಸಿಜನ್ ಪೈಪ್‌ಲೈನ್ ಜೋಡಣೆಗೆ ಸ್ಟೋರೂಮ್‌ನಲ್ಲಿಟ್ಟಿದ ತಾಮ್ರದ ಪೈಪ್, ಫಿಟಿಂಗ್ಸ್ ಮತ್ತು ಹಳೆ ತಾಮ್ರದ ಸ್ಟಿçಪ್‌ಗಳು ಕಾರಿನಲ್ಲಿ ತುಂಬಿಕೊAಡು ಕಳವು ಮಾಡಿಕೊಂಡು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಕಂಡುಬAದಿತ್ತು. ಅದರಂತೆ ಪ್ರಕರಣ ದಾಖಲಿಸಿಕೊಂಡ ಉಡುಪಿ ನಗರ ಠಾಣೆಯ ಪೊಲೀಸರು, ಆ.೧೨ರಂದು ಆರೋಪಿಗಳನ್ನು ಶಿವಮೊಗ್ಗದ ನಗರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿ ನಗರ ಠಾಣಾ ಪೊಲೀಸ್ ನಿರೀP್ಷÀಕ ಮಂಜುನಾಥ ವಿ ಬಡಿಗೇರ ನೇತೃತ್ವದ ವಿಶೇಷ ತಂಡವು ಈ ಕಾರ್ಯಾಚರಣೆ ನಡೆಸಿದೆ. ಉಡುಪಿ ನಗರ ಪೊಲೀಸ್ ಠಾಣಾ ಎಸ್ಸೆÊಗಳಾದ ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ, ನಾರಯಣ ಬಿ.ಗೋಪಾಲಕೃಷ್ಣ, ಸಿಬ್ಬಂದಿ ಪ್ರಸನ್ನ ಸಿ., ಸಂತೋಷ್ ಶೆಟ್ಟಿ, ಆನಂದ, ಸಂತೋಷ್ ರಾಥೋಡ್, ಶಿವು ಕುಮಾರ್, ಹೇಮಂತ ಕುಮಾರ್ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್ ಮತ್ತು ನಿತಿನ್ ಕುಮಾರ್ ಇದರಲ್ಲಿ ಪಾಲ್ಗೊಂಡಿದ್ದರು




