ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪ ಮಾಂಸಕ್ಕಾಗಿ ಗರ್ಭಿಣಿ ಹಸುವನ್ನು ಕಡಿದು, ಅದರ ಹೊಟ್ಟೆಯೊಳಗಿದ್ದ ಕರುವನ್ನು ಗೋಣಿ ಚೀಲದಲ್ಲಿ ಸುತ್ತಿ ಹೆಬಳೆಯ ವೆಂಕಟಾಪುರ ನದಿಯಂಚಿನಲ್ಲಿ ಗೋಕಳ್ಳರು ಎಸೆದಿರುವುದು ಪತ್ತೆಯಾಗಿದೆ.

ಬೀದಿ ನಾಯಿಯೊಂದು ಗೋಣೀಚೀಲವನ್ನು ಎಳೆಯುತ್ತಿರುವಾಗ, ಸ್ಥಳೀಯರಿಗೆ ಸತ್ತ ಎಳೆ ಕರು ಪತ್ತೆಯಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕೃತ್ಯ ನಡೆಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.