ಕಾಸರಗೋಡು: ಮೊಗ್ರಾಲ್ ಪುತ್ತೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸುತ್ತಿದ್ದಾಗ ಕ್ರೈನ್ ಬಕೆಟ್‌ನಿಂದ ಬಿದ್ದು ಇಬ್ಬರು ಕಾರ್ಮಿಕರು ಸಾ*ವನ್ನಪ್ಪಿರುವ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.
ಮೃ*ತರನ್ನು ಕೋಝಿಕ್ಕೋಡ್ ನಿವಾಸಿ ಅಕ್ಷಯ್ (30) ಮತ್ತು ವಡಗರ ನಿವಾಸಿ ಅಶ್ವಿನ್ (30) ಎಂದು ಗುರುತಿಸಲಾಗಿದೆ. ಅಕ್ಷಯ್ ಕುಂಬಳೆ ಆಸ್ಪತ್ರೆಯಲ್ಲಿ ನಿ*ಧನರಾದರೆ, ಅಶ್ವಿನ್ ಮಂಗಳೂರಿನ ಆಸ್ಪತ್ರೆಯಲ್ಲಿ ನಿ*ಧನರಾದರು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡಿದ್ದು, ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೆದ್ದಾರಿಯಲ್ಲಿ ಕ್ರೇನ್ ಬಳಸಿ ವಿದ್ಯುತ್ ದೀಪಗಳನ್ನು ಅಳವಡಿಸುತ್ತಿದ್ದಾಗ ಈ ಅಪ*ಘಾತ ಸಂಭವಿಸಿದೆ. ಇದನ್ನೂ ಓದಿ: ತೋಟಕ್ಕೆ ಅಡಿಕೆ ಹೆಕ್ಕಲು ಹೋಗಿದ್ದಾಗ ಕೆರೆಗೆ ಬಿದ್ದು ಮಹಿಳೆ ಸಾ*ವು ಇಬ್ಬರೂ ಕ್ರೇನ್ ಬಾಕ್ಸ್ ಒಳಗೆ ಕೆಲಸ ಮಾಡುತ್ತಿದ್ದಾಗ ಅದು ಇದ್ದಕ್ಕಿದ್ದಂತೆ ಬೇರ್ಪಟ್ಟು ಸರ್ವಿಸ್ ರಸ್ತೆಗೆ ಬಿದ್ದಿದೆ. ಈ ಕಾರಣದಿಂದ ಅವರಿಗೆ ಗಂ*ಭೀರ ಗಾ*ಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರನ್ನು ಉಳಿಸಲಾಗಲಿಲ್ಲ.




