ಉಡುಪಿ: ಕ್ರೆಡಿಟ್ ಕಾರ್ಡ್ ಆಯಕ್ಟಿವೇಶನ್ ಮಾಡಿ ಕೊಡುವುದಾಗಿ ತಿಳಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂ. ವರ್ಗಾಯಿಸಿಕೊಂಡ ಘಟನೆ ನಡೆದಿದೆ.
ಉಡುಪಿಯ ಅಬ್ದುಲ್ ಕರೀಮ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಆಯಕ್ಟಿವೇಶನ್ ಮಾಡುವುದಾಗಿ ಹೇಳಿ ಡೆಬಿಟ್ ಕಾರ್ಡ್ ಮಾಹಿತಿ ಹಾಗೂ ಒಟಿಪಿ ಪಡೆದು ಅವರ ಎಸ್.ಬಿ.
ಖಾತೆ
ಯಿಂದ 49,999 ರೂ.ಗಳನ್ನು ಕ್ರಮವಾಗಿ 10 ಸಲ ವರ್ಗಾವಣೆ ಮಾಡಿ ಒಟ್ಟು 4,99,990 ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.