ಬೆಂಗಳೂರು: ಸೈಬರ್ ವಂಚನೆಯಂತ ( Cyber Crime ) ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಕೇವಲ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ( Cyber Police Station ) ತೆರಳಿಯೇ ದೂರು ಸಲ್ಲಿಸಬೇಕಾಗಿತ್ತು. ಆದ್ರೇ ಇನ್ಮುಂದೆ ಸಿವಿಲ್ ಪೊಲೀಸ್ ಠಾಣೆಗಳಲ್ಲಿಯೂ ( Civil Police Station ) ಸೈಬರ್ ಕ್ರೈಂಗೆ ಸಂಬಂಧಿಸಿದಂತೆ ದೂರು ನೀಡಬಹುದಾಗಿದೆ.
ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಅವರು ಆದೇಶ ಹೊರಡಿಸಿದ್ದು, ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇನ್ಮುಂದೆ ಈ ಕುರಿತ ಸೈಬರ್ ಅಪರಾಧಗಳ ದೂರುಗಳನ್ನು ನಾಗರಿಗ ಪೊಲೀಸ್ ಠಾಣೆಗಳಲ್ಲೂ ನೀಡಬಹುದು ಎಂದಿದ್ದಾರೆ.
ಅಂದಹಾಗೇ ಈ ಮೊದಲು ಡಿಸಿಪಿ ಮತ್ತು ಎಸ್ ಪಿ ಮಟ್ಟದಲ್ಲಿ ತೆರೆಯಲಾಗಿದ್ದ ಸೈಬರ್, ಆರ್ಥಿಕ, ನಾರ್ಕೋಟಿಕ್ ಠಾಣೆಗಳಲ್ಲಿ ಅಷ್ಟೇ ದೂರು ದಾಖಲಿಸಲು ಅವಕಾಶ ಇತ್ತು. ಈಗ ಸಿವಿಲ್ ಠಾಣೆಗಳಲ್ಲೂ ಸೈಬರ್ ಕ್ರೈಂಗೆ ಸಂಬಂಧ ಪಟ್ಟಂತ ದೂರುಗಳನ್ನು ಸಲ್ಲಿಸಬಹುದಾಗಿದೆ.
ಅಂದಹಾಗೇ 2022ನೇ ಸಾಲಿನಲ್ಲಿ ರಾಜ್ಯದಲ್ಲಿ 12,548 ಸೈಬರ್ ಪರಾಧಗಳು ದಾಖಲಾಗಿದ್ದಾವೆ. ಇದರಲ್ಲಿ ಬೆಂಗಳೂರು ನಗರದಲ್ಲೇ ಅತೀ ಹೆಚ್ಚು ಸೈಬರ್ ಕ್ರೈಂ ಎಫ್‌ಐಆರ್ ಗಳು ದಾಖಲಾಗಿವೆ. ಪ್ರಸ್ತುತ ಸಿಸಿಬಿ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆ ಸೇರಿದಂತೆ 9 ಸಿಇಎಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ ಕಮಿಷನರೇಟ್ ನಲ್ಲಿ ಪ್ರತಿ ಡಿಸಿಪಿ ವಿಭಾಗಕ್ಕೆ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿ ಎಸ್ಪಿಗೆ ಒಂದರಂತೆ ಸಿಇಎಸ್ ಠಾಣೆಯನ್ನು ತೆರೆಯಲಾಗಿದೆ.