ದಕ್ಷಿಣ ಕನ್ನಡ ಜಿಲ್ಲಾ ಸಿಇಎನ್ ಅಪರಾಧ ಪೊಲೀಸು ಠಾಣಾ ಅ.ಕ್ರ. 11-2025, U/S 66(C ) 66(D) IT Act and 308, 318 (4),319(2)BNS.ಪ್ರಕರಣದಲ್ಲಿ ಆರೋಪಿ ಪತ್ತೆ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ ಇವರುಗಳ ನಿರ್ದೇಶನದಂತೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಮಂಜುನಾಥ ಆರ್.ಜಿ ರವರ ನೇತೃತ್ವದಲ್ಲಿ ಪಿಎಸ್‌ಐ ಯೂನುಸ್ ಆರ್ ಗಡ್ಡೆಕಾರ್ ಪಿಸಿ 2489 ನಾಗಪ್ಪ ಬೆನಕಟ್ಟಿ, ಇವರುಗಳ ತಂಡ ಆರೋಪಿಗಳಾದ 1)ಬೆಳಗಾವಿ ಜಿಲ್ಲೆ ರಾಮದೇವ್ ಗಲ್ಲಿಯ ಅನೂಪ್ ವಿಜಯ ಕಾರೇಕರ ವಡಗಾಂವ್, ಮತ್ತು 2)ಹುಕ್ಕೇರಿ ತಾಲೂಕಿನ ತಹಶೀಲ್ದಾರ್ ಗಲ್ಲಿ ಅವಿನಾಶ್ ವಿಠಲ ಸುತಾರ ಎಂಬವರನ್ನು ಬೆಳಗಾವಿಯಲ್ಲಿ ದಿನಾಂಕ: 10-03-2025 ರಂದು ದಸ್ತಗಿರಿ ಮಾಡಿದ್ದು, ಆರೋಪಿಗಳಿಂದ ಒಟ್ಟು 19 ಬ್ಯಾಂಕ್ ಖಾತೆಗಳು, 18 ಚೆಕ್ ಬುಕ್‌ಗಳು 15ಎಟಿಎಮ್ ಕಾರ್ಡ್ ಗಳು, 14 ಮೊಬೈಲ್ ಸಿಮ್ಗಗಳು ಹಾಗೂ ಒಂದು ಮೊಬೈಲ್ ನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಸ್ತುತ ವಿಧಿಸಿರುವುದಾಗಿದೆ. ನ್ಯಾಯಾಂಗ ಬಂಧನ ವಿಧಿಸಿರುವುದಾಗಿದೆ.
