ನವದೆಹಲಿ:ವಿಶ್ವದ ಶ್ರೇಷ್ಠ ಬೌದ್ಧ ಧರ್ಮಗುರು ದಲೈಲಾಮಾ ಅವರು ಬಾಲಕನ ತುಟಿಗೆ ಮುತ್ತು ಕೊಟ್ಟಿದ್ದು, ತನ್ನ ನಾಲಗೆಯನ್ನು ಹೀರುವಂತೆ ಹೇಳಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ
ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋದಲ್ಲಿ ದಲೈಲಾಮ ಅವರು ಬಾಲಕನ ತುಟಿಗೆ ಮುತ್ತು ಕೊಟ್ಟಿರುವುದು ಮಾತ್ರವಲ್ಲದೇ, ತನ್ನ ನಾಲಿಗೆಯನ್ನು ಹೀರುವಂತೆಯೂ ಕೇಳಿರುವುದನ್ನು ಕಾಣಬಹುದು.
ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಜೂಸ್ಟ್ ಬ್ರೋಕರ್ಸ್ ಎಂಬವರು, “ದಲೈ ಲಾಮಾ ಬೌದ್ಧ ಸಮಾರಂಭದಲ್ಲಿ ಭಾರತೀಯ ಹುಡುಗನನ್ನು ಚುಂಬಿಸುತ್ತಿದ್ದಾರೆ.ಅವನ ನಾಲಿಗೆಯನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಿದ್ದಾರೆ.”ನನ್ನ ನಾಲಿಗೆಯನ್ನು ಹೀರು” ಎಂದು ಹೇಳುತ್ತಾರೆ.ಹೀಗೆ ಮಾಡಿರುವುದೇಕೆ” ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೆಲವರು ದಲೈಲಾಮಾ ಅವರ ವರ್ತನೆಯನ್ನು ಯಾರೂ ಕೂಡಾ ಸಮರ್ಥಿಸಬಾರದು ಎಂದು ಸಾಮಾಜಿಕ ಜಾಲತಾಣ ಬಳಕೆದಾರರಾದ ದೀಪಿಕಾ ಪುಷ್ಕರ್ ನಾಥ್ ಟ್ವೀಟ್ ಮಾಡಿದ್ದಾರೆ.
ಕೆಲವು ನೆಟ್ಟಿಗರು, ಸರಿಯಾದ ಹಿನ್ನೆಲೆ ತಿಳಿಯದೇ ಟೀಕಿಸುವುದು ಸರಿಯಲ್ಲ. ಸಾರ್ವಜನಿಕವಾಗಿ ಆಲಂಗಿಸುವುದು, ಮುತ್ತು ನೀಡುವುದು, ಕೆನ್ನೆಗಳಿಗೆ ಚುಂಬಿಸುವುದು ಟಿಬೆಟ್ ಸಂಸ್ಕೃತಿಯಲ್ಲ. ಆದರೆ ನಾಲಿಗೆಯ ಮೂಲಕ ಶುಭ ಕೋರುವುದು ಬೌದ್ಧ ಪದ್ಧತಿಯಾಗಿದೆ. ಭಾರತದಿಂದ ಹೊರ ಹೋಗಿರುವ ಸಂಪ್ರದಾಯದಲ್ಲಿ ಇದೊಂದು ಪದ್ಧತಿ ಇಂದು ಕಣ್ಮರೆಯಾಗಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.