ಮಂಗಳೂರು: ಸ್ವಿಮಿಂಗ್ ಫೂಲ್ ನಲ್ಲಿ ಮೋಜುಮಸ್ತಿ ಮಾಡುವವರು ಅನೇಕ ಮಂದಿ ಇರ್ತಾರೆ, ಅದರಲ್ಲೂ ಕೆಲವು ಮಂದಿ ಮನೆಯಲ್ಲೆ ಸ್ವಿಮಿಂಗ್ ಪೂಲ್ ನಿರ್ಮಿಸಿ ಎಂಜಾಯ್ ಮಾಡ್ತಾರೆ.ಅದರೆ ಇಲ್ಲೊಂದು ಊರಲ್ಲಿ ವ್ಯಕ್ತಿಯೊಬ್ರು ಸ್ವಿಮಿಂಗ್ ಪೂಲ್ ನ್ನೂ ಬಿಸಿನೆಸ್ ಮಾಡಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವಿನ ಬಸ್ತಿಕೋಡಿಯಲ್ಲಿ ಈ ಸ್ವಿಮಿಂಗ್ ಫೂಲ್ ಇದೆ. ಇಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಾ, ಯುವಕರು ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತಿರುತ್ತಾರೆ. ಬಸ್ತಿಕೋಡಿ ನಿವಾಸಿ ಪ್ರಸ್ತುತ ಇಸ್ರೇಲ್ ನಲ್ಲಿ ಉದ್ಯಮಿಯಾಗಿರುವ ಜಾನ್ ಹಣದಾಸೆಗೆ ಈಗ ಮನೆಯನ್ನೇ ರೆಸಾರ್ಟ್ ಮಾಡಿದ್ದಾರೆ. ಮನೆಯ ಸ್ವಿಮ್ಮಿಂಗ್ ಫೂಲ್ ಅನ್ನು ಸಾರ್ವಜನಿಕರಿಗೆ ಗಂಟೆಗೆ ನೂರು ರೂಪಾಯಿಗೆ ಕೊಡಲಾಗುತ್ತಿದೆ. ಹೀಗೆ ಉದ್ಯಮಿ ಜಾನ್ ಹಣದಾಸೆಗೆ ಯುವಕರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.