ಬೆಳ್ತಂಗಡಿ: ಕಾಂಗ್ರೆಸ್ ಮುಖಂಡ ಅಬ್ದುಲ್ ಕರೀಂ ಅವರಿಗೆ ಎಸ್.ಡಿ.ಪಿ.ಐ ಕಾರ್ಯಕರ್ತರೆನ್ನಲಾದ ವ್ಯಕ್ತಿಗಳು ದೂರವಾಣಿ ಕರೆಮಾಡಿ ಬೆದರಿಕೆ ಹಾಕಿರುವುದಾಗಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿರುವುದಾಗಿ ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಮುಖಂಡರುಗಳ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಗಳನ್ನು ಹಾಕಲಾಗುತ್ತಿದ್ದು ಈ ಬಗ್ಗೆ ಅಲ್ಲಿಯೇ ಉತ್ತರ ನೀಡಿದ್ದೆ ಅದಕ್ಕೆ ಗ್ರೂಪಿನಲ್ಲಿಯೇ ಕೆಲವರು ಬೆದರಿಕೆ ಹಾಕಿದ್ದರು. ಇದಾದ ಬಳಿಕ ಕೆಲವು ಅಪರಿಚಿತ ನಂಬರ್ ಗಳಿಂದ ಕರೆ ಬಂದಿದ್ದು ಜೀವ ಬೆದರಿಕೆ ಹಾಕಿದ್ದಾರೆ. ಎಸ್.ಡಿ.ಪಿ.ಐಯವರಿಗೆ ಉತ್ತರ ನೀಡುತ್ತೀರಾ ಎಂದು ಕೇಳಿ ಮನೆಗೇ ಬಂದು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನಗರ ಅಧ್ಯಕ್ಷ ಸಲೀಂ ಗುರುವಾಯನಕೆರೆ, ವಿನ್ಸೆಂಟ್ ಡಿಸೋಜ, ಮೆಹಬೂಬ್, ರಫಿ ಬೆಳ್ತಂಗಡಿ, ಲತೀಫ್, ಎ.ಕೆ ಅಹಮ್ಮದ್, ಕೆ.ಹೆಚ್ ಖಾಲೀದ್, ಪುಲಾಬೆ ಇದ್ದರು.