ಪುತ್ತೂರು: ಸರ್ವೆ ಕಲ್ಪಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ, ಸೊರಕೆ ಸಮೀಪ ಪೆರಂಟೋಳು ನಿವಾಸಿ ಸುಪ್ರೀತ್(13) ಅವರು ದಿಢೀರ್ ಅನಾರೋಗ್ಯದಿಂದ ನ. 1ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಸುಪ್ರೀತ್ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾರೆ. ಸುಪ್ರೀತ್ ಅವರು ಮುಂಡೂರು ಗ್ರಾ.ಪಂ.ನ ಮಾಜಿ ಸದಸ್ಯೆ ಕುಸುಮಾ ಪೆರಂಟೋಳು ಮತ್ತು ಕುಂಞ ಮೇಸ್ತ್ರಿ ಅವರ ಪುತ್ರ. ಅವರು ಇಬ್ಬರು ಸಹೋದರರನ್ನು ಅಗಲಿದ್ದಾರೆ.