Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ದುಸ್ಥಿತಿಗೆ ತಲುಪಿದ ಕ್ಲಾಕ್ ಟವರ್‌ – ಒಣಗಿದ ಗಾರ್ಡನ್ ಸ್ಥಗಿತಗೊಂಡ ಕಾರಂಜಿ
    ಇತ್ತೀಚಿನ ಸುದ್ದಿ

    ಮಂಗಳೂರು: ದುಸ್ಥಿತಿಗೆ ತಲುಪಿದ ಕ್ಲಾಕ್ ಟವರ್‌ – ಒಣಗಿದ ಗಾರ್ಡನ್ ಸ್ಥಗಿತಗೊಂಡ ಕಾರಂಜಿ

    March 4, 2023
    Share

    ಮಂಗಳೂರು: ನಗರದ ಸೌಂದರ್ಯವರ್ಧನೆಗೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತದೆ‌. ಇಂತಹ ಸೌಂದರ್ಯ ಪ್ರಜ್ಞೆಯಿಂದಲೇ ನಿರ್ಮಾಣವಾಗಿರುವುದು ಮಂಗಳೂರಿನ ಹೃದಯಭಾಗದಲ್ಲಿರುವ ಕ್ಲಾಕ್ ಟವರ್. ಆದರೆ ಇದೀಗ ಈ ಕ್ಲಾಕ್ ಟವರ್ ಸೂಕ್ತ ನಿರ್ವಹಣೆಯಿಲ್ಲದೆ ದುಃಸ್ಥಿತಿ ತಲುಪಿದೆ. ಇಲ್ಲಿ ಕಾಣುತ್ತಿರುವುದೇ ಕ್ಲಾಕ್ ಟವರ್. ಮಂಗಳೂರಿನ ಸೌಂದರ್ಯಕ್ಕೆ ಹಿಡಿದ ಕನ್ನಡಿಯಂತಿರುವ ಇದು 2018ರಲ್ಲಿ ನಿರ್ಮಾಣಗೊಂಡಿತು. ಸ್ಮಾರ್ಟ್ ಸಿಟಿ ಕಾಮಗಾರಿಯಡಿಯಲ್ಲಿ ಅತ್ಯಂತ ದುಬಾರಿ ವೆಚ್ಚದಲ್ಲಿ ನಿರ್ಮಾಣಗೊಂಡಿತು.

    ಇತ್ತೀಚೆಗಷ್ಟೇ ಇದರ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಅಧಿಕೃತವಾಗಿ ಲೋಕಾರ್ಪಣೆಯೂ ಆಗಿಲ್ಲ. ಆದರೆ ಅದಾಗಲೇ ಕ್ಲಾಕ್ ಟವರ್ ಸರಿಯಾದ ನಿರ್ವಹಣೆಯಿಲ್ಲದೆ ದುಃಸ್ಥಿತಿಯನ್ನು ತಲುಪಿದೆ. ಕ್ಲಾಕ್‌ ಟವರ್‌ನ ಕಾರಂಜಿ ಚಾಲನೆಯಲ್ಲಿಲ್ಲ. ಸುತ್ತಲಿನ ಗಾರ್ಡನ್‌ಗೂ ನೀರು ಸರಬರಾಜು ಇಲ್ಲದೆ ಗಿಡಗಳು ಸೊರಗಿ ಹೋಗಿದೆ. 75 ಅಡಿ ಎತ್ತರದ ಕ್ಲಾಕ್‌ ಟವರ್‌ನ ಸುತ್ತಲೂ ನಾಲ್ಕು ಬೃಹತ್ ಗಡಿಯಾರಗಳಿವೆ. ರಾತ್ರಿ ವೇಳೆ ಸುಂದರ ವಿದ್ಯುತ್ ವ್ಯವಸ್ಥೆ ಹಾಗೂ ವರ್ಣ ರಂಜಿತ ಕಾರಂಜಿ ಕ್ಲಾಕ್‌ ಟವರ್‌ನ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಕಾಮಗಾರಿ ಬಳಿಕ ಸ್ಮಾರ್ಟ್ ಸಿಟಿ ನಿರ್ವಹಣೆಗೆ ಮಹಾನಗರ ಪಾಲಿಕೆಗೆ ಹಸ್ತಾಂತರಮಾಡಿತ್ತು. ಆದರೆ ಪಾಲಿಕೆ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ತೋರಿದೆ. ಬೃಹತ್ ಗಡಿಯಾರಗಳು ವಿದ್ಯುತ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಆದರೆ ಇದರ ಬಿಲ್ ಪಾವತಿಯಾಗದ ಹಿನ್ನೆಲೆ ಕೆಲ ದಿನಗಳ ಹಿಂದೆ ಮೆಸ್ಕಾಂ ಇದರ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಇದೀಗ ಬಿಲ್ ಪಾವತಿಯಾದ ಕಾರಣ ಗಡಿಯಾರದ ಮುಳ್ಳು ಮತ್ತೆ ಸುತ್ತುವುದಕ್ಕೆ ಆರಂಭಿಸಿದೆ. ಆದರೆ ಸರಿಯಾದ ನಿರ್ವಹಣೆಯಿಲ್ಲದೆ ಕ್ಲಾಕ್ ಟವರ್ ತನ್ನ ಸೌಂದರ್ಯ ಕಳೆದುಕೊಂಡು ಸೊರಗುತ್ತಿದೆ. ಆದ್ದರಿಂದ ಆದಷ್ಟು ಶೀಘ್ರ ಪಾಲಿಕೆ ಅಧಿಕಾರಿಗಳು ಕ್ಲಾಕ್ ಟವರ್ ನಿರ್ವಹಣೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿಬೇಕಿದೆ.

    Post Views: 187

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.