ಬೆಂಗಳೂರು: ರೇಷನ್ ಕಾರ್ಡ್ ವಿತರಣೆ ಸೇರಿದಂತೆ ಇಲಾಖೆ ಕಾರ್ಯನಿರ್ವಹಣೆಗೆ ಸಂಬಂಧಿಸಿದ ತಹಶೀಲ್ದಾರ್ ಮತ್ತು ಉಪ ತಹಶೀಲ್ದಾರ್ ಗಳ ಅಧಿಕಾರ ಹಿಂಪಡೆದು, ಪ್ರತಿ ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಇಲಾಖಾ ಕಚೇರಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂಬುದಾಗಿ ಆಹಾರ ಮತ್ತು ನಾಗರೀಕ ಸಹಕಾರ ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದಂತ ಅವರು, ಪ್ರತಿ ತಾಲೂಕಿಗೆ ಒಬ್ಬ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಿ, ಆಹಾರ ನಿರೀಕ್ಷಕರು, ಡೇಟಾ ಎಂಟ್ರಿ ಆಪರೇಟರ್ ಮತ್ತಿತರ ಸಿಬ್ಬಂದಿಯನ್ನು ಒಳಗೊಂಡ ಪ್ರತ್ಯೇಕ ವ್ಯವಸ್ಥೆಯನ್ನು ರೇಷನ್ ಕಾರ್ಡ್ ವಿತರಣೆ ಮಾಡೋದಕ್ಕಾಗಿಯೇ ಹೊಸ ಕಚೇರಿ ತೆರೆಯಲು ತೀರ್ಮಾನಿಸಲಾಗಿದೆ ಎಂದರು.
ಅಕ್ಕಿ ಅಲಭ್ಯತೆ ಕಾರಣ ಹಣ ನೀಡುವ ತೀರ್ಮಾನದಂತೆ ಎಲ್ಲಾ ಅರ್ಹ ಬಿಪಿಎಲ್ ಕಾರ್ಡಾದರರಿಗೆ ಈ ತಿಂಗಳ 26ರೊಳಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗುವುದು. 1.28 ಕೋಟಿ ಕಾರ್ಡ್ ದಾರರ ಪೈಕಿ 28 ಲಕ್ಷ ಕಾರ್ಡ್ ಗಳ ಬ್ಯಾಂಕ್ ಖಾತೆ ವಿವರಗಳು ಕಳೆದ ತಿಂಗಳು ಇಲಾಖೆಯಲ್ಲಿ ಇರಲಿಲ್ಲ. ಈ ಪೈಕಿ 2 ಲಕ್ಷ ಕಾರ್ಡ್ ಗಳ ಬ್ಯಾಂಕ್ ಖಾತೆ ವಿವರ ಕಲೆ ಹಾಕಲಾಗಿದೆ ಎಂದರು.