Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಅ. 30 ರಿಂದ ನ. 1 ರವರೆಗೆ ’ಮಂಗಳೂರು ದಿವಾ – ಮಿಡಲ್ ಈಸ್ಟ್ 2025’ ಸ್ಪರ್ಧೆ
    ಇತ್ತೀಚಿನ ಸುದ್ದಿ

    ಅ. 30 ರಿಂದ ನ. 1 ರವರೆಗೆ ’ಮಂಗಳೂರು ದಿವಾ – ಮಿಡಲ್ ಈಸ್ಟ್ 2025’ ಸ್ಪರ್ಧೆ

    July 5, 2025
    Share

    ಕರಾವಳಿ ಪ್ರದೇಶದ ಮಹಿಳೆಯರ ಸೊಬಗು, ಪ್ರತಿಭೆ ಮತ್ತು ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸಲು ದುಬೈ ನ ಗೋಷೆನ್ ಇವೆಂಟ್ಸ್ ಮೀಡಿಯಾ ಕಂಪನಿ ಹಾಗೂ ಪ್ರಿಯಾ ಫ್ಯಾಶನ್ ವತಿಯಿಂದ ಯು.ಎ.ಇ. ಅಜ್ಮನ್ ತುಂಬೆ ಮೆಡಿಸಿಟಿಯ ಸಹಯೋಗದೊಂದಿಗೆ ಆಯೋಜಿಸುತ್ತಿರುವ ’ಮಂಗಳೂರು ದಿವಾ-ಮಿಡಲ್ ಈಸ್ಟ್ 2025’ವಿಶೇಷ ಸೌಂದರ್ಯ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಯನ್ನು ಅ. 30 ರಿಂದ ನ. 1 ರವರೆಗೆ ದುಬೈ ನಲ್ಲಿಆಯೋಜಿಸಲಿದ್ದು, ಇದಕ್ಕೆ ಪೂರ್ವಾಭಾವಿಯಾಗಿ ಆನ್ ಲೈನ್ ನಲ್ಲಿ ಅರ್ಜಿ ಅಹ್ವಾನಿಸಲಾಗಿದೆ ಹಾಗೂ ಮಂಗಳೂರಿನಲ್ಲಿ ಅಡಿಷನ್ ಕೂಡಾ ನಡೆಯಲಿದೆ ಎಂದು ಗೋಷೆನ್ ಇವೆಂಟ್ಸ್ ಮೀಡಿಯಾ ದ ಸಂಸ್ಥಾಪಕಿ ಸಬಿತಾ ಕಾರ್ಲೋ ಹೇಳಿದರು.

    ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಿಸ್ (21-35 ಅವಿವಾಹಿತ) ಮತ್ತು ಮಿಸೆಸ್ (24 ವರ್ಷಕ್ಕಿಂತ ಮೇಲ್ಪಟ್ಟ – ವಿವಾಹಿತ/ವಿಚ್ಛೇದಿತ) ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಮಂಗಳೂರು ಹಾಗೂ ದೇಶದೆಲ್ಲೆಡೆಯಿರುವ ಮಂಗಳೂರು ಮೂಲದ ಮಹಿಳೆಯರು ಪ್ರತಿಷ್ಠಿತ ಅಂತರಾಷ್ಟ್ರೀಯ ವೇದಿಕೆಯಲ್ಲಿ ಮಿಂಚಬೇಕೆನ್ನುವ ದೃಷ್ಠಿಯಿಂದ ಮಂಗಳೂರು, ಬೆಂಗಳೂರು, ಮುಂಬಯಿ ಸೇರಿದಂತೆ ನಾನಾ ನಗರಗಳಲ್ಲಿ ಪ್ರಾದೇಶಿಕ ಆಡಿಷನ್‌ಗಳು ನಡೆಯಲಿದೆ. ಈಗಾಗಲೇ ಇನ್ಸ್ಟಾಗ್ರಾಮ್, ಗೂಗಲ್ ಫಾರ್ಮ್ ಹಾಗೂ ವಾಟ್ಸಾಪ್ ಮೂಲಕ ಆನ್ ಲೈನ್ ನಲ್ಲಿ ನೋಂದಣಿ ಮಾಡಲು ಅವಕಾಶ ನೀಡಲಾಗಿದ್ದು, ಆ. 31 ಕೊನೆಯ ದಿನವಾಗಿದೆ. ಸೆಪ್ಟೆಂಬರ್ ನಲ್ಲಿ ಮಂಗಳೂರಿನ ಅಡಿಷನ್ ನಡೆಯಲಿದೆ. ಸ್ಪರ್ಧಿಗಳಿಗೆ 2 ದಿನಗಳ ವರ್ಕ್ ಶಾಪ್ ಕೂಡಾ ನಡೆಯಲಿದೆ. ಸ್ಪರ್ಧೆಯಲ್ಲಿ ಸಾಂಸ್ಕೃತಿಕ ಸಮ್ಮಿಲನದ ಸುತ್ತುಗಳಲ್ಲಿ ಕರಾವಳಿ ಸೊಬಗನ್ನು ಪ್ರದರ್ಶಿಸುವ ಸಾಂಪ್ರದಾಯಿಕ ಉಡುಪು, ಪಾಶ್ಚಾತ್ಯ ಉಡುಪು, ಪ್ರಶ್ನೋತ್ತರ ವಿಭಾಗಗಳಿವೆ. ವಿಜೇತರು ನಗದು ಬಹುಮಾನ, ಟ್ರೋಫಿ, ಕಿರೀಟ ಧಾರಣೆ, ಬ್ರಾಂಡ್ ರಾಯಭಾರಿ ಅವಕಾಶ ಮತ್ತು ಕೋಸ್ಟಲ್‌ವುಡ್ ಚಲನಚಿತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ. ಸಮಾಜದಲ್ಲಿ ಮಹಿಳೆಯರ ಗುರುತು, ಸಂಸ್ಕೃತಿ ಮತ್ತು ವಿಕಸನಗೊಳಿಸಲು ಈ ಸ್ಪರ್ಧೆಯು ಮಹತ್ತರ ಪಾತ್ರ ವಹಿಸಲಿದೆ ಎಂದು ಹೇಳಿದರು.

    ಗೋಷೆನ್ ಇವೆಂಟ್ಸ್ ಮೀಡಿಯಾ ದ ಸ್ಥಾಪಕಿ ದೇಚಮ್ಮ ಪೂಣಚ್ಚ ಬಳಿಮನೆ, ಪ್ರಿಯಾ ಫ್ಯಾಶನ್ ಸ್ಥಾಪಕಿ ಪ್ರಿಯಾ ಫೆರ್ನಾಂಡಿಸ್, ಗೌತಮ್ ಬಂಗೇರ, ಚೈತ್ರಾ ಶೆಟ್ಟಿ, ಸಮತಾ ಅಮೀನ್ ಹಾಗೂ ಸಿದ್ದಾರ್ಥ್ ಶೆಟ್ಟಿ ಉಪಸ್ಥಿತರಿದ್ದರು.

    Post Views: 223

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.