ಮಂಗಳೂರು;ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಕೊಲೆಯತ್ನ, ಅಥವಾ ಹಲ್ಲೆ ಘಟನೆ ನಡೆದಿಲ್ಲ, ಈ ಬಗ್ಗೆ ಯಾರೂ ಸುಳ್ಳು ಸುದ್ದಿ ಹರಡಬೇಡಿ ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.
ಕೊಲೆ ಯತ್ನ ನಡೆಸಿದ್ದಾರೆಂಬ ಸುದ್ದಿ ಸುಳ್ಳಾಗಿದ್ದು, ವ್ಯಕ್ತಿಯೊಬ್ಬರು ಕಂಕನಾಡಿ ಠಾಣೆಗೆ ಆಗಮಿಸಿ ತನಗೆ ಇಂಟರ್ನೆಟ್ ಮೂಲಕ ಬೆದರಿಕೆ ಕರೆ ಬಂದಿರುವುದಾಗಿ ಹಾಗೂ ತನ್ನನ್ನು ಯಾರೋ ಎರಡು ಮೂರು ಬೈಕ್ ಗಳಲ್ಲಿ ಹಿಂಬಾಲಿಸುತ್ತಿರುವುದಾಗಿ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಇಂಟರ್‌ನೆಟ್ ಮೂಲಕ ಕರೆ ಬಂದಿರುವುದು ಕಂಡು ಬಂದಿದೆ. ಆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಯಾರೋ ಹಿಂಬಾಲಿಸಿಕೊಂಡು ಬಂದ ಬಗ್ಗೆ ಸಿಸಿಟಿವಿ ಪರಿಶೀಲಿಸಲಾಗಿದೆ. ಅದು ಫುಡ್ ಡೆಲಿವರಿಯ ವಾಹನವಾಗಿದ್ದು, ಅದು ದೂರು ನೀಡಿರುವ ವ್ಯಕ್ತಿಯ ಪಕ್ಕದ ಮನೆಗೆ ಆರ್ಡರ್ ಪೂರೈಕಾಗಿ ಬಂದಿದ್ದಾಗಿದೆ. ಈ ಬಗ್ಗೆ ದೂರುದಾರರಿಗೂ ಮನವರಿಕೆಯಾಗಿದೆ ಎಂದು ಹೇಳಿದ್ದಾರೆ.
ನಿನ್ನೆ ಘಟನೆ ಆಗಿದ್ದು, ನಾನು ಕಂಕನಾಡಿ ಠಾಣೆಗೆ ತೆರಳಿ, ದೂರು ನೀಡಿರುವ ವ್ಯಕ್ತಿ ಜತೆ ಮಾತನಾಡಿ, ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ ಅರ್ಧ ಗಂಟೆಯಲ್ಲೇ ಈ ಪ್ರಕರಣವನ್ನು ಸ್ಪಷ್ಟಪಡಿಸಿದ್ದೇನೆ.ಈ ಬಗ್ಗೆ ಸುಳ್ಳು ಸುದ್ದಿ ಹರಡಬೇಡಿ ಎಂದು ಕಮಿಷನರ್ ಹೇಳಿದ್ದಾರೆ.
ಈ ಮೊದಲು ಕಂಕಾನಾಡಿ ಠಾಣಾ ವ್ಯಾಪ್ತಿಯಲ್ಲಿ ವಿಹೆಚ್ ಪಿ ಕಾರ್ಯಕರ್ತನ ಕೊಲೆಯತ್ನ, ತಪ್ಪಿಸಿಕೊಂಡು ರಕ್ಷಿಸಿಕೊಂಡಿದ್ದಾರೆ ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿತ್ತು.ಇದಕ್ಕೆ ಕಮಿಷನರ್ ಇದೀಗ ಸ್ಪಷ್ಟನೆ ನೀಡಿದ್ದಾರೆ.