ಮಾಜಿ ಉಪಸಭಾಪತಿ, ಹಿರಿಯ ನ್ಯಾಯವಾದಿ 98ನೇ ವಯಸ್ಸಿನ ಡಾ.ಎನ್.ತಿಪ್ಪಣ್ಣ ವಯೋಸಹಜ ಕಾಯಿಲೆಯಿಂದ ಇಂದು (ಜು.11) ಬೆಳಿಗ್ಗೆ 5 ಗಂಟೆ ಸುಮಾರಿಗೆ ಬಳ್ಳಾರಿಯ ಗಾಂಧಿನಗರದ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷರಾಗಿದ್ದ ಇವರು ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಎರಡು ಬಾರಿ ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಅನುಭವಿ ಹಿರಿಯ ನ್ಯಾಯವಾದಿ, ಸಮಾಜ ಸೇವಕರಾಗಿ ಸಾಕಷ್ಟು ಹೆಸರು ಮಾಡಿದ್ದರು. ಇದನ್ನೂ ಓದಿ: ಎಂ.ಆರ್.ಪಿ.ಎಲ್. ಸಂಸ್ಥೆ ವತಿಯಿಂದ ಸ್ವಚ್ಛತಾ ಪಖ್ವಾಡ 2025; 5 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಶಾ ಕಾರ್ಯಕರ್ತರಿಗೆ ನೆರವು ಇಂದು ಬಳ್ಳಾರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು. ಶನಿವಾರ ತಿಪ್ಪಣ್ಣ ಅವರ ಸ್ವಗ್ರಾಮ ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.




