ಹರಿಯಾಣ : ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರನ್ನು ರೋಗಿಗಳು ಗುರುತಿಸಲು ಸುಲಭವಾಗಲು ಹರಿಯಾಣ ಸರ್ಕಾರ ಹೊಸ ಡ್ರೆಸ್ ಕೋಡ್ ನೀತಿಯನ್ನು ಜಾರಿಗೆ ತಂದಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಏಕರೂಪತೆಯನ್ನು ತರಲು ಆಸ್ಪತ್ರೆಯ ಸಿಬ್ಬಂದಿ ಡೆನಿಮ್ ಜೀನ್ಸ್, ಪಲಾಝೋ ಪ್ಯಾಂಟ್, ಬ್ಯಾಕ್‌ಲೆಸ್ ಟಾಪ್ಸ್ ಹಾಗೂ ಸ್ಕರ್ಟ್ಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
ಮಹಿಳಾ ವೈದ್ಯರು ಮೇಕಪ್ ಹಾಗೂ ಭಾರವಾದ ಆಭರಣಗಳನ್ನು ಧರಿಸುವಂತಿಲ್ಲ ಮಾತ್ರವಲ್ಲದೇ ಉಗುರುಗಳನ್ನು ಉದ್ದವಾಗಿ ಬೆಳೆಸುವಂತಿಲ್ಲ. ಪುರುಷರು ತಮ್ಮ ಕಾಲರ್‌ಗಿಂತಲೂ ಉದ್ದವಾಗಿ ಕೂದಲನ್ನು ಬೆಳೆಸುವಂತಿಲ್ಲ ಎನ್ನಲಾಗಿದೆ.
‘ಡ್ರೆಸ್ ಕೋಡ್ ಅನ್ನು ಅನುಸರಿಸದ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ವೈದ್ಯರನ್ನು ರೋಗಿಗಳು ಗುರುತಿಸಲು ಸುಲಭವಾಗಲು ಈ ಹೊಸ ರೂಲ್ಸ್ ಜಾರಿಗೆ ಮಾಡಲಾಗಿದೆ ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಮಾಹಿತಿ ನೀಡಿದ್ದಾರೆ.