ಕಾಸರಗೋಡು: ಬಸ್ಸು ಚಾಲಕನ ಕೊಲೆಗೆತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಯ್ಯಾರಿನ ಚಂದು ( ೪೨) ಮತ್ತು ಮೇರ್ಕಳದ ಚಂದ್ರಹಾಸ (೫೦) ಬಂಧಿತರು. ಜೂನ್ ೧೮ ರಂದು ಕಯ್ಯಾರಿನ ಅಬ್ದುಲ್ ರಶೀದ್ ರ ಮೇಲೆ ಹಲ್ಲೆ ನಡೆಸಲಾಗಿತ್ತು. ರಾತ್ರಿ ಮನೆಗೆ ತೆರಳುತ್ತಿದ್ದ ರಶೀದ್ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂದ್ಯೋಡು ಅಡ್ಕದ ವಿಷ್ಣು ಎಂಬಾತನನ್ನು ಈ ಹಿಂದೆ ಬಂಧಿಸಲಾಗಿತ್ತು.