ಉಪ್ಪಿನಂಗಡಿ: ಮಾದಕ ವಸ್ತು ಸೇವನೆ ಮತ್ತು ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನುಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ ಘಟನೆ ಪೆರ್ನೆಯಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಕೌಕ್ರಾಡಿ ಗ್ರಾಮದ ದೋಂತಿಲ್ಲ ಮನೆ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಮಹಮ್ಮದ್ ತೌಫೀಕ್ (22) ಎಂದು ಗುರುತಿಸಲಾಗಿದೆ.
ಗಸ್ತು ನಿರತ ಪೊಲೀಸರು ಶನಿವಾರ ಪೂರ್ವಾಹ್ನ 11 ಗಂಟೆ ಸುಮಾರಿಗೆ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆಟೋ ರಿಕ್ಷಾವೊಂದು ನಿಲ್ಲಿಸಲು ಸೂಚಿಸಿದರು. ರಿಕ್ಷಾ ಚಾಲಕ ಸೂಚನೆಯನ್ನು ಪರಗಣಿಸದೆ ಮುಂದಕ್ಕೆ ಚಲಿಸಿದಾಗ ಪೊಲೀಸರು ಬೆನ್ನಟ್ಟಿ ರಿಕ್ಷಾ ಚಾಲಕ ಮಹಮ್ಮದ್ ತೌಫೀಕ್‌ನನ್ನು ವಿಚಾರಣೆಗೊಳಪಡಿಸಿದಾಗ ತಾನು ಮಾದಕ ವಸ್ತು ಎಂಡಿಎಂಎ ನ್ನು ಸೇವಿಸಿದ್ದಾಗಿ, ತನ್ನ ಸೇವನೆ ಹಾಗೂ ಮಾರಾಟಕ್ಕಾಗಿ ಪೆರ್ನೆಯ ಸಲಿಂ ಎಂಬಾತ ಮಾದಕ ವಸ್ತುವನ್ನು ತನಗೆ ನೀಡಿದ್ದಾನೆಂದು ಪೊಲೀಸರ ವಿಚಾರಣೆ ವೇಳೆ ತಿಳಿಸಿರುತ್ತಾನೆ. ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.