ಬೆಂಗಳೂರು: ನಗರದ ಕೆಎಸ್ ಆರ್ ರೈಲು ನಿಲ್ದಾಣಣದಲ್ಲಿ ಮಹಿಳೆಯೊಬ್ಬಳ ಪ್ರಯಾಣಿಕರಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ರೈಲ್ವೆಯ ಉಪ ಮುಖ್ಯ ಟಿಕೆಟ್ ಪರಿವೀಕ್ಷಕರೊಬ್ಬರನ್ನು ಬಂಧಿಸಲಾಗಿದೆ.
ಸಂತೋಷ ಕುಮಾರ್ ಬಂಧಿತ ಆರೋಪಿ.
ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಮಾರ್ಚ್ 14ರಂದು ಸಂತೋಷ್ ಎಂಬಾತ
ಮಹಿಳೆಗೆ ಕಿರುಕುಳ ನೀಡಿದ್ದರು ಎಂದು ಕರ್ನಾಟಕ ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಸಂತೋಷ್ ಮಹಿಳೆಗೆ ಕಿರುಕುಳ ನೀಡುತ್ತಿರುವ ದೃಶ್ಯವನ್ನು ಮತ್ತೊಬ್ಬ ಪ್ರಯಾಣಿಕ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯು ಡಿಸಿಟಿಐ ಜತೆ ನೊಂದು ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ನೀವ್ಯಾಕೆ ನನ್ನನ್ನು ತಳ್ಳುತ್ತಿದ್ದೀರಿ, ನಿಧಾನವಾಗಿ ಮಾತನಾಡಿ. ಟಿಕೆಟ್ ಕಾಯ್ದಿರಿಸಿದ ಕಾರಣ ನಾನಿಲ್ಲಿಗೆ ಬಂದಿದ್ದೇನೆ ಎಂದು ಮಹಿಳೆ ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.ಟಿಕೆಟ್ ತೋರಿಸು ಅಂತ ಆವಾಗಿನಿಂದಲೂ ಕೇಳುತ್ತಾ ಇದ್ದೇನೆ. ಟಿಕೆಟ್ ಚೆಕ್ ಮಾಡುವುದು ನನ್ನ ಕೆಲಸ. ತೋರಿಸಿ ಹೋಗು ಎಂದು ನಿನಗೇ ಹೇಳುತ್ತಿದ್ದೇನೆ’ ಎಂದು ಆರೋಪಿ ಹೇಳಿದ್ದಾರೆ.ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮಹಿಳೆ ಪಶ್ಚಿಮ ಬಂಗಾಳದವರಾಗಿದ್ದು ಉದ್ಯೋಗ ಅರಸುವುದಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಪಶ್ಚಿಮ ಬಂಗಾಳಕ್ಕೆ ತೆರಳುವುದಕ್ಕಾಗಿ ಎಸ್ಎಂವಿಟಿ ಬೆಂಗಳೂರು ಹಮ್ಸಫರ್ ಎಕ್ಸ್ಪ್ರೆಸ್ ರೈಲಿಗೆ ತೆರಳಿದ್ದಾಗ ಘಟನೆ ನಡೆದಿದೆ.