ಮಂಗಳೂರು : ರಾತ್ರಿ 9.30 ಕ್ಕೆ ಬೆಂಗಳೂರಿಗೆ ತೆರಳಬೇಕಿದ್ದ ದುರ್ಗಂಬಾ ಮೋಟರ್ಸ್ KA 51B 3129, ಬಸ್ಸು, ಪ್ರಯಾಣಿಕರ ಮೇಲೆ ಯಾವುದೇ ಕಾಳಜಿ ತೋರಿಸದೆ,ಯಾವುದೇ ಬದಲಿ ವ್ಯವಸ್ಥೆ ಮಾಡದೇ,ಬಹಳ ತಡವಾಗಿ ತಡರಾತ್ರಿ 1.15 ಕ್ಕೆ ಜ್ಯೋತಿ ಯಿಂದ ಹೊರಟಿತು.
ದುರ್ಗಂಬಾ ಮೋಟರ್ಸ್ ನ ಬಸ್ಸು ಮಣ್ಣಗುಡ್ಡೆಯಲ್ಲಿ ಒಂದು ಜೀಪ್ ಗೆ ಡಿಕ್ಕಿ ಹೊಡೆದ ಕಾರಣದಿಂದ, ಕದ್ರಿ ಸ್ಟೇಷನ್ ನಲ್ಲಿ ನಿಲ್ಲಿಸಿದರೂ, ಪಾಂಡೇಶ್ವರ ಠಾಣೆಯ ಪರಿಧಿಗೆ ಬರುವುದರಿಂದ ಪುನಹ ಜ್ಯೋತಿಯಲ್ಲಿ ಬಸ್ಸನ್ನು ನಿಲ್ಲಿಸಲಾಯಿತು.
ಅಧಿಕ ಬಸ್ ಗಳನ್ನು ಹೊಂದಿರುವ ದುರ್ಗಂಬ ಮೋಟರ್ಸ್ ನವರು, ಕೂಡಲೇ ಬದಲಿ ವ್ಯವಸ್ಥೆ ಮಾಡದುದರಿಂದ ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲಾ ಶಾಪ ಹಾಕಿದರು. ಕೊನೆಗೆ ಡ್ರೈವರ್ ನ ಅಲ್ಕೋಹೋಲಿಕ್ ಟೆಸ್ಟ್ ನ ನಂತರ, ಕೇಸನ್ನು ಧಾಖಲಿಸುವ ಒಪ್ಪಂದದ ಮೇರೆಗೆ, ಅದೇ ಚಾಲಕನು ಬಸ್ ನ್ನು ಚಲಾಯಿಸಿಕೊಂಡು ತಡರಾತ್ರಿ 1.15 ಕ್ಕೆ ಜ್ಯೋತಿಯಿಂದ ತೆರಳಲಾಯಿತು.
ದುರ್ಗಂಬ ಮೋಟರ್ಸ್ ನವರು ಪ್ರಯಾಣಿಕರ ಮೇಲೆ ತೋರಿಸಿದ ಕಡೆಗಣಿಸುವ ಮನೋಭಾವವನ್ನು ಇಲ್ಲಿ ನೆರೆದಿದ್ದ ಜನರು ಖಂಡಿಸಿದರು.