ಕುಂದಾಪುರ ಹೊಸ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಅರ್ಜಿ ಕೇಂದ್ರದಲ್ಲಿ ನಕಲಿ ರಬ್ಬರ್ ಸ್ಟ್ಯಾಂಪ್ ಇಟ್ಟುಕೊಂಡು ಸರಕಾರಿ ನಾನಾ ಇಲಾಖೆಯ ನಕಲಿ ದಸ್ತಾವೇಜು ತಯಾರಿಸಿಕೊಡುತ್ತಿದ್ದ ಆರೋಪದಲ್ಲಿ ಬಂಧಿತರಾಗಿರುವ ಕೋಡಿ ನಾಗೇಶ್ ಕಾಮತ್ ಅವರ ಜಾಮೀನು ಅರ್ಜಿಯನ್ನು ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.

ಖಚಿತ ಮಾಹಿತಿಯ ಮೇರೆಗೆ ಪಿಎಸ್‌ಐಗಳಾದ ಪುಷ್ಪಾ, ನಂಜಾ ನಾಯ್ಕ ಮತ್ತು ತಂಡದವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ನಾನಾ ಇಲಾಖೆಯ ನಕಲಿ 22 ಸೀಲುಗಳನ್ನು ವಶಪಡಿಸಿಕೊಂಡಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಆರೋಪಿಯು ಜಾಮೀನು ಕೋರಿ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ನ್ಯಾಯಾಧೀಶರಾದ ಅಬ್ದುಲ್ ರಹೀಂ ಹುಸೈನ್ ಶೇಖ್ ವಜಾಗೊಳಿಸಿದ್ದಾರೆ. ಅರ್ಜಿಯನ್ನು ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಇಂದಿರಾ ನಾಯ್ಕ ವಾದ ಮಂಡಿಸಿ ತನಿಖೆಯ ಹಿತದೃಷ್ಟಿಯಿಂದ ಆರೋಪಿಗೆ ಜಾಮೀನು ನೀಡಬಾರದು ಎಂದು ವಾದಿಸಿದ್ದರು.