ಉಡುಪಿ: 6ನೇ ಮಹಡಿಗೆ ವಾಟರ್’ಪೂಫಿಂಗ್ ಅಂತಾ ಹೋಗಿದ್ದ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮದ ಅಜ್ಜರಕಾಡು ಬಳಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಸಂತೋಷ್ (46) ಎಂದು ಗುರುತಿಸಲಾಗಿದೆ.
ಸಂತೋಷ್ ವಾಟರ್ ಪೂಫಿಂಗ್ ಕೆಲಸವನ್ನು ಮಾಡಿಕೊಂಡಿದ್ದು ಡಿಸೆಂಬರ್ 2 ರಂದು ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ವಾಟರ್ ಪೂಫಿಂಗ್ ಕೆಲಸಕ್ಕೆ ಹೋಗಿದ್ದರು. ಸಂತೋಷ್ ರವರು ಮಧ್ಯಾಹ್ನ 2 ಗಂಟೆಗೆ ಊಟ ಮಾಡಿ ಕಟ್ಟಡದ ಆರನೇ ಅಂತಸ್ಥಿನ ಮೇಲಿರುವ ಟ್ಯಾಂಕಿಗೆ ವಾಟರ್ ಪ್ರೋಫಿಂಗ್ ಮಾಡಲು ತೆರಳಿದ್ದು, ಕೆಲಸವನ್ನು ಮುಗಿಸಿ ವಾಪಸ್ಸು ಕೆಳಗಡೆ ಬರಲು 6ನೇ ಅಂತಸ್ಥಿನ ಮೇಲೆ ಅಳವಡಿಸಿದ ಪಾಲಿಕಾರ್ಮರ್ ಶೀಟ್ ನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅವುಗಳ ಮಧ್ಯ ಅಳವಡಿಸಿದ ಟ್ರಾಸ್ಸ್ಪರೆಂಟ್ ಶೀಟ್ ಒಂದರ ಮೇಲೆ ಕಾಲು ಇಟ್ಟ ಕಾರಣ ಶೀಟ್ ತೆಳುವಿದ್ದದ್ದರಿಂದ ಸಂತೋಷ್ ರವರು ಆಯತಪ್ಪಿ 6 ನೇ ಅಂತಸ್ಥಿನ ಮೇಲ್ಮಾವಣಿನಿಂದ ನೇರ ನೆಲಕ್ಕೆ ಅಂಗಾತ ಬಿದ್ದು ತಲೆಗೆ ಕೈಗೆ ಪೆಟ್ಟಾದವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.