ಬೆಳ್ತಂಗಡಿ: ಹಳೆಕೋಟೆಯ ವಾಣಿ ಕಾಲೇಜ್ ಮುಂಭಾಗದಲ್ಲಿರುವ ರಾಘವೇಂದ್ರ ಪೂಜಾರಿ ಮಾಲಕತ್ವದ ಸ್ವಸ್ತಿಕ್ ಆಟೋ ಗ್ಯಾರೇಜಿನಲ್ಲಿ ನಿನ್ನೆ (ನ.16) ಅಗ್ನಿ ಅವಘಡ ಸಂಭವಿಸಿದೆ. ಆಟೋದ ಬ್ಯಾಟರಿಯ ದೋಷದಿಂದ ಬೆಂಕಿ ತಗುಲಿ ಆಟೋ ಸಮೇತ ಶಾಪ್‌ನಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಮಾರಾಟ ಮಾಡಲು ತಂದಿದ್ದ ಹಳೆ ಆಟೋವನ್ನು ಸಂಜೆ ಶಾಪ್ ಒಳಗಡೆ ಇಟ್ಟು ಬೀಗ ಹಾಕಿ ಕೆಲಸಗಾರರು ಹೋಗಿದ್ದರು. ರಾತ್ರಿ ಸುಮಾರು 8:30ರ ಸಮಯದಲ್ಲಿ ನಿಲ್ಲಿಸಿದ್ದ ಆಟೋದಲ್ಲಿದ್ದ ಬ್ಯಾಟರಿಯ ದೋಷದಿಂದ ಬೆಂಕಿ ತಗುಲಿ ಶಾಪ್ ಸಂಪೂರ್ಣ ಸುಟ್ಟು ಹೋಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಮತ್ತು ಪೊಲೀಸರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಶಾಪ್‌ನಲ್ಲಿದ್ದ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ.




