ಮಂಗಳೂರು : ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರಣ್ಯಾಧಿಕಾರಿಗೆ ಭ್ರಷ್ಟಾಚಾರದಡಿ 1.5 ಕೋಟಿ ದಂಡ ಮತ್ತು 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಸತ್ರ (ವಿಶೇಷ) ನ್ಯಾಯಾಲಯ ತೀರ್ಪು ನೀಡಿದೆ.
ಬೆಳ್ತಂಗಡಿ ಸೈಹಾದ್ರಿ ವಲಯದ ವಲಯ ಅರಣ್ಯಾಧಿಕಾರಿ ಆರೋಪಿ ಎಸ್.ರಾಘವ ಪಾಟಾಳಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಆರೋಪಿಯಾಗಿದ್ದಾರೆ. ಪಾಟಾಳಿ ಮೇಲೆ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿರುವ ದೂರಿನ ಮೇರೆಗೆ ಮಂಗಳೂರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ D:21-07-2011 do da od 11/2011 o 13(1x) tad 13(2) ಭ್ರಷ್ಟಾಚಾರ ತಡೆ ಕಾಯ್ದೆ 1988, ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಯನ್ನು ನಡೆಸಿದ ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಮಾನ್ಯ ಬಿ.ಬಿ. ಜಕಾತಿ ಅವರು ಅಂತಿಮ ತೀರ್ಪು ನೀಡಿದ್ದು. ತೀರ್ಪಿನಲ್ಲಿ ಎಸ್.ರಾಘವ ಪಾಟಾಳಿ, ವಲಯ ಅರಣ್ಯಾಧಿಕಾರಿ, ಸಹ್ಯಾದ್ರಿ ವಲಯ, ಇವರ ವಿರುದ್ಧ ಕಲಂ 13(1)(ಇ) ಜೊತೆಗೆ 13(2) .ಭ್ರಷ್ಟಾಚಾರ ತಡೆ ಕಾಯ್ದೆ 1988, ರಂತೆ 05 ವರ್ಷಗಳ ಸಾದಾ ಸಜೆ ಹಾಗೂ ರೂ 1,50,00,000/- (1 ಕೋಟಿ ಐವತ್ತು ಲಕ್ಷ ರೂಪಾಯಿ) ದಂಡ ವಿಧಿಸಿದ್ದು ಆರೋಪಿಯು ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 1 ವರ್ಷಗಳ ಕಾಲ ಸಾದಾ ಸಜೆ ಶಿಕ್ಷೆಯನ್ನು ಆದೇಶಿಸಿ ತೀರ್ಪು ನೀಡಿದ್ದಾರೆ. 2011 ರಲ್ಲಿ ಈ ಪ್ರಕರಣ ನಡೆದಿದ್ದು ಅಂದಿನ ಲೋಕಯುಕ್ತ ಇನ್ಸ್ಪೆಕ್ಟರ್ ಉದಯ್ .ಎಂ. ನಾಯಕ್ ಬೆಳ್ತಂಗಡಿಯ ಕಚೇರಿ ಮತ್ತು ಮಂಗಳೂರು ಕೊಂಚಾಡಿಯ ಮನೆಗೆ ದಾಳಿ ಮಾಡಿ ಪಾಟಾಳಿ ವಿರುದ್ದ ಪ್ರಕರಣ ದಾಖಲು ಮಾಡಿದ್ದರು. ಲೋಕಯುಕ್ತ ಡಿವೈಎಸ್ ಪಿ ವಿಠಲ ದಾಸ ಪೈ ಪ್ರಕರಣದ ತನಿಖೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ರವೀಂದ್ರ ಮಣಿಪಾಡಿ ಅವರು ಲೋಕಾಯುಕ್ತದ ವಿಶೇಷ ಅಭಿಯೋಜಕಾರಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. .