Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಳ್ಳಾಲ: ಮಾಜಿ ರೌಡಿ ಶೀಟರ್ ನೇಣು ಬಿಗಿದು ಆತ್ಮಹತ್ಯೆ..!
    ಇತ್ತೀಚಿನ ಸುದ್ದಿ

    ಉಳ್ಳಾಲ: ಮಾಜಿ ರೌಡಿ ಶೀಟರ್ ನೇಣು ಬಿಗಿದು ಆತ್ಮಹತ್ಯೆ..!

    October 18, 2023
    Share

    ಉಳ್ಳಾಲ: ಗಾಂಜಾ ಸೇವಿಸಿ ರೌಡಿಸಂ ನಡೆಸಿದ್ದ ಮಾಜಿ ರೌಡಿ ಶೀಟರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೇವಂತಿಗುಡ್ಡೆ ನಿವಾಸಿ ಶಮೀರ್ (41) ಆತ್ಮ ಹತ್ಯೆಕ್ಕೀಡಾದ ವ್ಯಕ್ತಿ.. ಶಮೀರ್ ಕ್ಯಾನ್ಸರ್‌ನಿಂದ ಮೃತಪಟ್ಟ ನಟೋರಿಯಸ್ ರೌಡಿ ಶಬರಿಯ ಸಹಚರನಾಗಿದ್ದು ಉಳ್ಳಾಲ ಠಾಣೆಯಲ್ಲಿ ಹಳೆಯ ರೌಡಿ ಶೀಟರ್ ಆಗಿದ್ದ. ಗಾಂಜಾ, ಮದ್ಯ ವ್ಯಸನಿಯಾಗಿದ್ದ ಶಮೀರ್ ಜೀವನ ನಿರ್ವಹಣೆಗೆ ಇತ್ತೀಚಿಗೆ‌ ಆಟೋ ರಿಕ್ಷಾ ಚಲಾಯಿಸುತ್ತಿದ್ದ. ನಿನ್ನೆ ಸಂಜೆ ಒಳಪೇಟೆಯ ರಿಕ್ಷಾ ಚಾಲಕರಲ್ಲಿ ಗಲಾಟೆ ನಡೆಸಿದ್ದ ಶಮೀರ್ ಯಾರೊಬ್ಬರಿಗೂ ಪಾರ್ಕಲ್ಲಿ ಆಟೋ ರಿಕ್ಷಾ ಪಾರ್ಕ್ ಮಾಡಲು ಬಿಡುವುದಿಲ್ಲವೆಂದು ಆವಾಜ್ ಹಾಕಿದ್ದನಂತೆ. ಶಮೀರನ ತಾಯಿ ಒಂದು ತಿಂಗಳ ಹಿಂದಷ್ಟೆ ಮೃತ ಪಟ್ಟಿದ್ದರಂತೆ. ಕಳೆದ ಮೂರು ದಿನಗಳ ಹಿಂದಷ್ಟೆ ಶಮೀರ್ ಚಲಾಯಿಸುತ್ತಿದ್ದ ಆಟೋ ರಿಕ್ಷಾವೂ ಪಲ್ಟಿ ಹೊಡೆದಿದ್ದು,ರಿಕ್ಷಾದ ಲೋನ್ ಬಾಕಿಯಿತ್ತು. ಮೃತ ಶಮೀರ್‌ಗೆ ಎರಡು ಹೆಣ್ಣು, ಒಂದು ಗಂಡು ಮಕ್ಕಳಿದ್ದು ಪತ್ನಿಯೂ ಅನಾರೋಗ್ಯದಲ್ಲಿ ಬಳಲುತ್ತಿದ್ದರು ಎನ್ನಲಾಗುತ್ತಿದೆ. ನವರಾತ್ರಿ ರಜೆ ಸಿಕ್ಕ ಕಾರಣ ಪತ್ನಿ ,ಮಕ್ಕಳು ತವರು ತೆರಳಿದ್ದರು. ಇಂದು ಬೆಳಿಗ್ಗೆ ಮನೆಯಲ್ಲಿ ಒಂಟಿಯಾಗಿದ್ದ ಶಮೀರ್ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.

    Post Views: 222

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.