ಉಡುಪಿ: ಗೂಗಲ್‌ನಲ್ಲಿ ವಿವರ ಹುಡುಕಾಡಿದಾಗ ಸಿಕ್ಕಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಮಹಿ ಳೆಯೊಬ್ಬರು 80 ಸಾವಿರ ರೂ. ಕಳೆದುಕೊಂಡಿದ್ದಾರೆ.
ಬೀಜಾಡಿ ನಿವಾಸಿ ರೂಪಾಶ್ರೀ ಎಂಬುವರು ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದು, ಒಂದು ವಾರ ಕಳೆದರೂ ಪುಸ್ತಕಗಳು ಬಾರದೆ ಇರುವುದನ್ನು ಕಂಡು ಗೂಗಲ್‌ನಲ್ಲಿ ಕೊರಿಯ ಸಂಸ್ಥೆ ವಿವರವನ್ನು ಹುಡುಕಾಡಿದ್ದರು. ಈ ಸಂದರ್ಭ ಲಭಿಸಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಆತ ತಾನು ಕೊರಿಯರ್ ಸಂಸ್ಥೆಯವನೆಂದು ನಂಬಿಸಿ, ರೂಪಶ್ರೀ ಅವರ ಮೊಬೈಲ್‌ಗೆ ಲಿಂಕ್ ಕಳುಹಿಸಿ, ವಿವರಗಳನ್ನು ಪಡೆದುಕೊಂಡಿದ್ದ. ಅದೇ ದಿನ ಹಲವು ಬಾರಿ ಒಟ್ಟು 80,602 ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ. ಸನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.