ಮಂಗಳೂರು : ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ನಕಲಿ ಇ ಚಲನ್ ಕಳುಹಿಸಿ ವ್ಯಕ್ತಿಯೊಬ್ಬರ ಖಾತೆಯಿಂದ 1.31 ಲಕ್ಷ ರೂ. ಗಳನ್ನು ವರ್ಗಾಯಿಸಿಕೊಂಡ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.24ರಂದು ತನಗೆ ವಾಟ್ಸಾಪ್ ನಂಬರ್ ವೊಂದರಿಂದ ಮೆಸೇಜ್ ಬಂದಿದ್ದು, ಅದನ್ನು ಡೌನ್‌ಲೋಡ್ ಮಾಡಿದಾಗ ಮೊಬೈಲ್ ಗೆ 16 ಒಟಿಪಿಗಳು ಬಂದಿದ್ದವು. ಬಳಿಕ ಪ್ಲಿಪ್ ಕಾರ್ಟ್ ಹಾಗೂ ಅಮೇಜಾನ್ ನಲ್ಲಿ ತನ್ನ ಕ್ರೆಡಿಟ್ ಕಾರ್ಡ್ ಮೂಲಕ 30,400 ರೂ., ಡೆಬಿಟ್ ಕಾರ್ಡ್ ಮೂಲಕ 16,700 ರೂ. ಮತ್ತು ಪೇ ಲೇಟರ್ ನಲ್ಲಿ 71,496 ರೂ. ಹಣ ವರ್ಗಾವಣೆಯಾದ ಬಗ್ಗೆ ಮೊಬೈಲ್‌ಗೆ ಮೆಸೇಜ್ ಬಂತು. ತಕ್ಷಣ ಮೊಬೈಲ್ ಮೂಲಕ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನ್ನು ಬ್ಲಾಕ್ ಮಾಡಿದೆ. ಯಾರೋ ಅಪರಿಚಿತರು ಎಪಿಕೆ ಫೈಲ್ ಮೂಲಕ ತನ್ನ ಡೆಬಿಟ್, ಕ್ರೆಡಿಟ್ ಕಾರ್ಡ್‌ನ ಮಾಹಿತಿ ಪಡೆದು ಪ್ಲಿಪ್‌ಕಾರ್ಟ್ ನಲ್ಲಿ 39,398 ರೂ. ಮೌಲ್ಯದ ಒನ್ ಪ್ಲಸ್ ಮೊಬೈಲ್, 32,398 ರೂ. ಮೌಲ್ಯದ ಮೊಟೊರೊಲಾ ಎಜ್ ಮೊಬೈಲ್, 12,800 ರೂ. ಮೌಲ್ಯದ ಏರ್ ಪೋಡ್, 14,700 ರೂ, 29,400 ರೂ., 3,000 ರೂ ಹೊಸದಿಲ್ಲಿಯ ವಿಳಾಸದಲ್ಲಿರುವ ವ್ಯಕ್ತಿಗೆ ಆರ್ಡರ್ ಮಾಡಿ 1,31,396 ರೂ. ವಂಚಿಸಿದ್ದಾರೆ ಎಂದು ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.