ಉಡುಪಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಹಣ ದೊರಕಿಸಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ.ವಂಚಿಸಿದ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲದ ವಿನೋದಾ ಅವರು ನ.2ರಂದು ಪಿಎಂಎಲ್ ಎಂಬ ಸ್ಟಾಕ್ ಮಾರ್ಕೆಟ್‌ಗೆ ಸಂಬಂಧಿಸಿದ ಸಂಸ್ಥೆ ಬಗ್ಗೆ ಆನ್‌ಲೈನ್‌ನಲ್ಲಿ ತಿಳಿದುಕೊಂಡು ನ.27ರಂದು ಪಿಎಂಎಲ್ ಮ್ಯಾಕ್ಸ್ ಮತ್ತು ಪಿಎಂಎಲ್ ಪ್ರೊ ಮೊಬೈಲ್ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿದ್ದರು.
ಆರಂಭದಲ್ಲಿ ಹೂಡಿಕೆ ಮಾಡಿದ ಹಣವನ್ನು ಐಪಿಒ ಪ್ರಕಾರ ಹಿಂದಿರುಗಿಸಿದ್ದು, ಬಳಿಕ ಹೂಡಿದ ಹಣವನ್ನು ಹಿಂಪಡೆಯಲು ಸಾಧ್ಯವಾಗಿಲ್ಲ. ಈ ಬಗ್ಗೆ ಕಂಪೆನಿಯವರಲ್ಲಿ ವಿಚಾರಿಸಿದಾಗ ನೀವು ಇನ್ನೂ ಹಣ ಹೂಡಿಕೆ ಮಾಡಿದರೆ ಮಾತ್ರ ಹಿಂಪಡೆಯಲು ಸಾಧ್ಯ ಎಂದು ತಿಳಿಸಿದ್ದರು.
ಅದನ್ನು ನಂಬಿ ವಿನೋದಾ ಡಿ.24ರ ವರೆಗೆ 20,17,754 ರೂ.ಗಳನ್ನು ಕಂಪೆನಿಯ ಬೇರೆ ಬೇರೆ ಬ್ಯಾಂಕ್‌ಗಳ ಖಾತೆಗಳಿಗೆ ಜಮೆ ಮಾಡಿದ್ದರು. ಆದರೂ ಕಂಪೆನಿಯವರು ಹಣವನ್ನು ಮರಳಿಸದೆ ಮೋಸ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.