Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಸೌಹಾರ್ದ ಸೊಸೈಟಿಯಿಂದ 7.25 ಕೋ.ರೂ. ವಂಚನೆ ಆರೋಪ : ಪ್ರಕರಣ ದಾಖಲು
    ಇತ್ತೀಚಿನ ಸುದ್ದಿ

    ಸೌಹಾರ್ದ ಸೊಸೈಟಿಯಿಂದ 7.25 ಕೋ.ರೂ. ವಂಚನೆ ಆರೋಪ : ಪ್ರಕರಣ ದಾಖಲು

    February 14, 2025
    Share

    ಕುಂದಾಪುರ:  ವೆಂಕಟರಮಣ ಆರ್ಕೇಡ್‌ನ‌ಲ್ಲಿರುವ ಕುಂದಾಪುರ ಸೌಹಾರ್ದ ಕ್ರೆಡಿಟ್‌ ಕೋ ಆಪರೇಟಿವ್‌ ಸಂಸ್ಥೆಯಲ್ಲಿ ಇರಿಸಿದ್ದ 7.25 ಕೋ.ರೂ. ಠೇವಣಿಯನ್ನು ಗ್ರಾಹಕರಿಗೆ ಮರಳಿಸದೆ ವಂಚಿಸಲಾಗಿದೆ ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕುಂದಾಪುರ ಕಸಬಾದ ಶ್ರೀಧರ್‌ ದೂರು ನೀಡಿದ್ದು, ಅವರು 2022ರಲ್ಲಿ ಮಗಳಾದ ಶ್ರೀರûಾ ಹೆಸರಿನಲ್ಲಿ ಇಟ್ಟ 2 ಲಕ್ಷ ರೂ., ಶ್ರೀ ವರ್ಷಾ ಹೆಸರಿನಲ್ಲಿ ಇಟ್ಟ 5 ಲಕ್ಷ ರೂ. ಠೇವಣಿ ವಾಯಿದೆ ಮುಗಿದರೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಮತ್ತು ನಿರ್ದೇಶಕರು ಆ ಹಣವನ್ನು ಮರಳಿಸಿಲ್ಲ. ಇದೇ ರೀತಿ ಸುಮಾರು 44 ಜನರ ಒಟ್ಟು 7,18,24,831 ರೂ. ಠೇವಣಿ ವಾಯಿದೆ ಮುಗಿದರೂ ಮರಳಿ ನೀಡದೇ ಇರುವುದು ಗಮನಕ್ಕೆ ಬಂದಿದೆ.

    ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಶಿವಾನಂದ, ನಿರ್ದೇಶಕರಾದ ಪ್ರಕಾಶ ಲೋಬೋ, ಮಹೇಶ ಲಕ್ಷ್ಮಣ ಕೊತ್ವಾಲ, ವಿಟuಲ, ಅವಿನಾಶ ಪಿಂಟೋ, ಕೆ. ರಾಜೇಶ ದೈವಜ್ಞ, ಎಚ್‌. ಮಹಾಬಲ, ರತ್ನಾಕರ, ದಯಾನಂದ, ಮರ್ವಿನ್‌ ಫೆರ್ನಾಂಡಿಸ್‌, ಸರೋಜಾ, ಸುಧಾಕರ, ಗೋಪಾಲ, ಡಾ| ದಿನಕರ ಇವರೆಲ್ಲ ಸೇರಿ ಒಟ್ಟು 7,25,24,831 ರೂ. ಹಣವನ್ನು ಠೇವಣಿದಾರರಿಗೆ ವಾಪಸು ನೀಡಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ನಂಬಿಕೆ ದ್ರೋಹ ಮತ್ತು ಮೋಸ ಮಾಡಿ ಅಧಿಕಾರ ದುರುಪಯೋಗ ಮಾಡಿದ್ದಾಗಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Post Views: 186

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.