ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗೌರಿ-ಗಣೇಶ ಹಬ್ಬದ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವೂ ವ್ಯಾಪಕ ಚರ್ಚೆಗೆ ಗುರಿಯಾಗಿದೆ.ಇದೀಗ ಶಾಲೆಯಲ್ಲಿ ಶುಕ್ರವಾರ ದಿನ ನಮಾಜ್ ಗೆ ಅವಕಾಶ ನೀಡಿ. ನಮಗೂ ನಮಾಜ್ ಗೆ ಅವಕಾಶ ಮಾಡಿ ಕೊಡಿ ಅಂತಾ ಶಿಕ್ಷಣ ಸಚಿವರಿಗೆ ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ.
ಕೋಲಾರದ ಒಂದು ಶಾಲೆಯಲ್ಲಿ ಶುಕ್ರವಾರದಂದು ಮುಸ್ಲಿಮ್ ಮಕ್ಕಳಿಗೆ ನಮಾಜ್ಮಾಡಲು ಅವಕಾಶ ನೀಡಿದ್ದಕ್ಕೆ ಶಾಲೆಯ ಮುಖ್ಯಸ್ಥರನ್ನೇ ಕೆಲಸದಿಂದ ಅಮಾನತು ಮಾಡಲಾಗಿತ್ತು.
ಶಾಲೆಯಲ್ಲಿ ಹಿಜಾಬ್ ಬೇಡ ಅಂದವರು ಗಣೇಶನನ್ನು ಹೇಗೆ ಕೂರಿಸ್ತೀರಾ ಎಂದು ಮುಸ್ಲಿಂ ಮುಖಂಡರು ಶಿಕ್ಷಣ ಸಚಿವರಿಗೆ ಪ್ರಶ್ನೆ ಮಾಡಿದ್ದಾರೆ.
ಇನ್ನು ಕ್ರಿಶ್ಚಿಯನ್ಸ್ ಗೆ ಕ್ರಿಸ್ ಮೆಸ್ ಆಚರಣೆಗೆ ಅವಕಾಶ ಕೊಡಿ. ಆದ್ರೆ ಗಣೇಶ ಮೂರ್ತಿ ಕೂರಿಸಲು ಅವಕಾಶ ನೀಡಿದ್ದೀರಾ.. ನಮಗೂ ಕೂಡ ಅವಕಾಶ ಮಾಡಿ ಕೊಡಿ ಅಂತಾ ಮುಖಂಡರು ಬೇಡಿಕೆ ಇಟ್ಟಿದ್ದಾರೆ.