ಅಪರಿಚಿತ ಬೈಕ್ ಸವಾರನೊಬ್ಬ ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರ ಸುಲಿಗೆ ಮಾಡಿದ ಘಟನೆ ಕಾರ್ಕಳದ ಬಾರಾಡಿ-ಕಾಂತಾವರ ರಸ್ತೆಯಲ್ಲಿ ಸಂಭವಿಸಿದೆ.
ಬೆಳಗ್ಗೆ 11ಕ್ಕೆ ಕಾಂತಾವರ ಗ್ರಾಮದ ಗೋಪಿ ಅವರು ಕಾಂತೇಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಸು ಮನೆಗೆ ಬರುತ್ತಿದ್ದಾಗ ಕಾಂತಾವರ ಗ್ರಾಮದ ಅಂಬರೀಶ ಗುಹೆ ಸಮೀಪ, ಬಾರಾಡಿ-ಕಾಂತಾವರಕ್ಕೆ ಹೋಗುವ ರಸ್ತೆಯಲ್ಲಿ ಓರ್ವ ಬೈಕ್‌ನಲ್ಲಿದ್ದ ಅಪರಿಚಿತ ಹತ್ತಿರಕ್ಕೆ ಬಂದು ತುಳುವಿನಲ್ಲಿ ವಿಳಾಸ ಕೇಳಿದ್ದು, ಅನಂತರ ಅವರನ್ನು ಹಿಡಿದುಕೊಂಡು ಅವರು ಧರಿಸಿದ್ದ ಚಿನ್ನದ ಚೈನ್ ಅನ್ನು ಎಳೆದುಕೊಂಡು ಪರಾರಿಯಾಗಿದ್ದಾನೆ. ಗೋಪಿ ಅವರು ಪ್ರತಿರೋಧಿಸಿದ ಸಂದರ್ಭ ಚೈನ್‌ನ ಒಂದು ತುಂಡು ಅವರ ಕೈಯಲ್ಲಿ ಉಳಿದಿದ್ದು, ಕಳ್ಳ ಬಲವಾಗಿ ತಳ್ಳಿದ ಪರಿಣಾಮ ಗೋಪಿ ಅವರ ಕೈ, ಕುತ್ತಿಗೆಗೆ ಗಾಯವಾಗಿದೆ. ಸುಲಿಗೆಯಾದ ಚಿನ್ನದ ಮೌಲ್ಯ 1.20 ಲಕ್ಷ ರೂ. ಎನ್ನಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.