ಪುತ್ತೂರು: ವೀರ ಯೋಧನ ಹೆಸರಿನಲ್ಲಿ ನಿರ್ಮಾಣಗೊಂಡಿದ್ದ ವೃತ್ತಕ್ಕೆ ಹಸಿರು ಬಟ್ಟೆ ಸುತ್ತಿದ ಹಿನ್ನಲೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲ ಎಂಬಲ್ಲಿ ಅಕ್ಟೋಬರ್ 8 ರಂದು ನಡೆದಿದೆ.
26/11 ಮುಂಬೈ ಉಗ್ರರ ದಾಳಿಯಲ್ಲಿ ಮೃತಪಟ್ಟ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸವಿ ನೆನಪಿಗಾಗಿ ಈಶ್ವರಮಂಗಲ ಸರ್ಕಲ್ ನಲ್ಲಿ ಈ ವೃತ್ತವನ್ನು ನಿರ್ಮಿಸಲಾಗಿತ್ತು.
ಆದರೆ ಇಂದು ಮುಂಜಾನೆ ವೃತ್ತದ ಸುತ್ತ ಹಸಿರು ಬಟ್ಟೆ ಸುತ್ತಿ, ಹಸಿರು ಧ್ವಜಗಳನ್ನು ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಇದರಿಂದ ಆಕ್ರೋಶಿತಗೊಂಡಿರುವ ಹಿಂದೂ ಸಂಘಟನೆ ಕಾರ್ಯಕರ್ತರು ತಕ್ಷಣ ಹಸಿರು ಹೊದಿಕೆಯನ್ನು ತೆಗೆಯುವಂತೆ ಒತ್ತಾಯಿಸಿದ ಹಿನ್ನಲೆಯಲ್ಲಿ ಇದೀಗ ಹಸಿರು ಹೊದಿಕೆಯನ್ನು ತೆರವು ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆಯಲಾಗಿದೆ.