Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಬಸ್ಸು ಚಲಾಯಿಸುತ್ತಿದ್ದಾಗಲೇ ಚಾಲಕ ಹೃದಯಘಾತದಿಂದ ಸಾವು
    ಇತ್ತೀಚಿನ ಸುದ್ದಿ

    ಬಸ್ಸು ಚಲಾಯಿಸುತ್ತಿದ್ದಾಗಲೇ ಚಾಲಕ ಹೃದಯಘಾತದಿಂದ ಸಾವು

    February 19, 2024
    Share

    ಕಾಸರಗೋಡು: ಬಸ್ಸು ಚಲಾಯಿಸುತ್ತಿದ್ದಾಗಲೇ ಚಾಲಕನೋರ್ವ ಹೃದಯಘಾತದಿಂದ ಮೃತಪಟ್ಟ ಘಟನೆ ಚೇವಾರ್ ಸಮೀಪದ ಕುಂಟಗೇರಡ್ಕದಲ್ಲಿ ನಡೆದಿದೆ. ಸ್ವಲ್ಪದರಲ್ಲೇ ಭಾರೀ ದುರಂತ ತಪ್ಪಿದೆ ಎನ್ನಬಹುದು.

    ಚೇವಾರ್ ಕುಂಟಗೇರಡ್ಕದ ಅಬ್ದುಲ್ ರಹಮಾನ್ (42) ಮೃತ ಪಟ್ಟವರು. ಧರ್ಮತ್ತಡ್ಕ – ಕಾಸರಗೋಡು ರಸ್ತೆಯಲ್ಲಿ ಸಂಚರಿಸುವ ಗಝಲ್ ಬಸ್ಸು ಚಾಲಕರಾಗಿದ್ದರು. ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಘಟನೆ ನಡೆದಿದೆ. ಪೆರ್ಮುದೆ ಜಂಕ್ಷನ್ ಗೆ ಬಸ್ಸು ತಲಪಿದಾಗ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ಬಸ್ಸಿನಿಂದ ಇಳಿದು ಸಮೀಪದ ಅಂಗಡಿಯಿಂದ ನೀರು ಕುಡಿದಿದ್ದರು. ಬಳಿಕ ಬಸ್ಸು ಚಲಾಯಿಸಿಕೊಂಡು ಬಂದಿದ್ದಾರೆ.

    ಸುಮಾರು ಮೂರು ಕಿಲೋ ಮೀಟರ್ ತನಕ ಬಸ್ಸು ಚಲಾಯಿಸಿಕೊಂಡು ಬಂದಿದ್ದು, ಚೇವಾರ್ ಕುಂಟಗೇರಡ್ಕ ಸ್ಟಾಪ್ ತಲುಪಿದಾಗ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ ಬಸ್ಸು ಕೆಲ ನಿಮಿಷವಾದರೂ ಮುಂದಕ್ಕೆ ಸಾಗದಿದ್ದುದರಿಂದ ಗಮನಿಸಿದಾಗ ಸ್ಟಿಯರಿಂಗ್ ಮೇಲೆ ತಲೆ ಇಟ್ಟು ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆದರೆ ಚಾಲಕ ಬಸ್ಸು ನಿಲ್ಲಿಸಿದರಿಂದ ಭಾರೀ ದುರಂತ ತಪ್ಪಿದೆ ಎನ್ನಬಹುದು.

    ಬಸ್ಸು ಸ್ಟಾರ್ಟ್ ನಲ್ಲಿತ್ತು. ಪ್ರಯಾಣಿಕರು ಹಾಗೂ ನಾಗರಿಕರು ಕೂಡಲೇ ಬಂದ್ಯೋಡಿನ ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಮೃತಪಟ್ಟಿದ್ದರು. ಘಟನೆ ನಡೆದಾಗ ಬಸ್ಸಿನಲ್ಲಿ ಮಹಿಳೆಯರು , ಮಕ್ಕಳು ಸೇರಿದಂತೆ 30 ಕ್ಕೂ ಅಧಿಕ ಪ್ರಯಾಣಿಕರಿದ್ದರು. ಅಬ್ದುಲ್ ರಹಮಾನ್ ಕಳೆದ ಕೆಲ ವರ್ಷಗಳಿಂದ ಬಸ್ಸು ಚಾಲಕರಾಗಿ ದುಡಿಯುತ್ತಿದ್ದರು.

    Post Views: 193

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.