ಮಂಗಳೂರು: ಪೊಲೀಸರು ಹಿಂಬಾಲಿಸುತ್ತಿದ್ದವೇಳೆ ಕಾರು ಮಗುಚಿ ಬಿದ್ದು ವಿದ್ಯಾರ್ಥಿ ಸಾವಿಗೀಡಾದ ಘಟನೆ ಬಗ್ಗೆ ಹೈಕೋರ್ಟ್ ಗಡಿ ರಾಜ್ಯ ಕೇರಳ ಸರಕಾರದಿಂದ ಸ್ಪಷ್ಟಿಕರಣ ಕೇಳಿದೆ. ಕಳೆದ ವರ್ಷ ಆ.25ರಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಕುಂಬಳೆ ಪೇರಾಲ್ ಕಣ್ಣೂರು ನಿವಾಸಿ (17) ಶಾಲೆಯಲ್ಲಿ ನಡೆದ ಓಣಂ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ನೇಹಿತರ ಜತೆ ಕಾರಿನಲ್ಲಿಮರಳುತ್ತಿದ್ದರು. ಆಗ ಆ ದಾರಿಯಾಗಿ ಬಂದ ಪೊಲೀಸರು ಯಾವುದೋ ಅನುಮಾನದಿಂದ ಆ ಕಾರನ್ನು ತಮ್ಮ ವಾಹನದಲ್ಲಿ ಹಿಂಬಾಲಿಸಿರುವುದಾಗಿ ಆರೋಪಿಸಲಾಗಿತ್ತು. ಆ ವೇಳೆ ಆ ಕಾರು ಅಪಘಾತಕ್ಕೀಡಾಗಿ ಅದರಲ್ಲಿದ್ದ ಫರ್ಹಾಸ್ ಗಂಭೀರ ಗಾಯಗೊಂಡು ಬಳಿಕ ಮಂಗಳೂರಿನ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವು ಸಂಭವಿಸಿತ್ತು. ಆಸ್ಪತ್ರೆಗೆ ಚಿಕಿತ್ಸೆ ಆ.29ರಂದು ಆ ಘಟನೆಗೆ ಸಂಬಂಧಿಸಿ ಕಾರನ್ನು ಹಿಂಬಾಲಿಸಿದ ಪೊಲೀಸರ ವಿರುದ್ಧ ಇಲಾಖಾ ಮಟ್ಟದ ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮಾತ್ರವಲ್ಲದೆ, ನಷ್ಟ ಪರಿಹಾರವನ್ನೂ ನೀಡಬೇಕೆಂದು ಕೋರಿ ಮೃತ ಫರ್ಹಾಸ್‌ನ ತಾಯಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಹೈಕೋರ್ಟ್ ಆ ಬಗ್ಗೆ ಸ್ಪಷ್ಟಿಕರಣ ನೀಡುವ ಅಫಿದವಿತ್ ಸಲ್ಲಿಸುವಂತೆ ರಾಜ್ಯ ಸರಕಾರದ ಕಾರ್ಯದರ್ಶಿ ಮತ್ತು ಕಾಸರಗೋಡು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.